ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಚೊಚ್ಚಲ ಬಜೆಟ್ ಭಾಷಣದೊಂದಿಗೆ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಮಂಡನೆಗೂ ಮೊದಲು ದೇಶದಲ್ಲಿ 2ನೇ ಬಾರಿಗೆ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಲು ಕಾರಣರಾದ ಎಲ್ಲಾ ಮತದಾರರಿಗೂ ಧನ್ಯವಾದ ತಿಳಿಸಿ 5ವರ್ಷದ ಹಿಂದೆ ವಿಶ್ವದಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಆದರೆ ಈಗಾ 5ನೇ ಸ್ಥಾನದಲ್ಲಿದ್ದು, ಬಲಿಷ್ಠ ದೇಶ, ಬಲಿಷ್ಠ ನಾಗರಿಕ ನಮ್ಮ ಗುರಿ ಎಂದು ಹೇಳಿ ಬಜೆಟ್ ಮಂಡನೆ ಮಾಡಿದ್ದು,
• ಮೂಲ ಸೌಕರ್ಯ ಹಾಗೂ ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತದೆ.
• ಭಾರತದಲ್ಲಿ ಮೊದಲು 3 ಟ್ರಿಲಿಯನ್ ಆರ್ಥಿಕತೆ ಇತ್ತು ಆದರೆ ಈಗಾ ಕೆಲವು ವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆ ಯೋಜನೆಯನ್ನು ರೂಪಿಸಿದೆ. ಈ ಮೂಲಕ ನಾವು ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು ಬದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
• 2022ರ ವೇಳೆಗೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೂ ಎಲ್‍ಪಿಜಿ ಸೌಲಭ್ಯ.
• ಕೃಷಿಕರಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವುದು.
• ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1.95 ಕೋಟಿ ಮನೆ ನಿರ್ಮಾಣ
• ಉಜ್ವಲ ಹಾಗೂ ಸೌಭಾಗ್ಯ ಯೋಜನೆಯ ಮೂಲಕ ಗ್ರಾಮೀಣ ಜನರ ಅಭಿವೃದ್ಧಿ.
• 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪಿಸಲು ನಿರ್ಧಾರ.
• ಉಜ್ವಲ ಯೋಜನೆಯಡಿ 35ಕೋಟಿ ಎಲ್‍ಇಡಿ ಬಲ್ಬ್ ವಿತರಿಸಲಾಗುವುದು. ಇದರಿಂದ 18.5 ಕೋಟಿ ರೂ ಉಳಿತಾಯವಾಗುತ್ತದೆ.
• ಉದ್ಯಮಗಳಲ್ಲಿ ಮಹಿಳೆಯ ಪಾಲುದಾರಿಕೆ ಹೆಚ್ಚಿಸಲು ಕ್ರಮ.
• 2ವರ್ಷಗಳಲ್ಲಿ 300 ಸ್ಟ್ಯಾಂಡ್ ಅಪ್ ಉದ್ಯಮಗಳ ಸೃಷ್ಟಿ
• ಜನ್‍ಧನ್ ಖಾತೆ ಹೊಂದಿರುವ ಮಹಿಳೆಯರಿಗೆ 5 ಸಾವಿರ ಓವರ್ ಡ್ರಾಫ್ಟ್ ಹಾಗೂ ಎಲ್ಲಾ ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯಿತಿಯಲ್ಲಿ ಸಾಲ.
• ಎನ್‍ಆರ್‍ಐ ಗಳಿಗೆ ಆಧಾರ್ ಆಧಾರಿತ ಪಾಸ್‍ಪೋರ್ಟ್ ನೀಡಲು ನಿರ್ಧಾರ.
• ನಾರಿ ಟು ನಾರಾಯಣಿ ಮೂಲಕ ಸಬಲೀಕರಣಕ್ಕೆ ಒತ್ತು ನೀಡಲಾಗುವುದು. ಲಿಂಗ ತಾರತಮ್ಯ ನಿವಾರಣೆಗೆ ಸರ್ಕಾರದಿಂದ ಹೊಸ ಯೋಜನೆ.
• 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ತಿಂಗಳಿಗೆ 3ಸಾವಿರ ರೂ ಪೆನ್ಷನ್.
• ರೋಬೋಟಿಕ್ ತಂತ್ರಜ್ಞಾನ ಉಧ್ಯಮಕ್ಕೆ ಆಧ್ಯತೆ.
• ಸ್ಟ್ಯಾಂಡ್ ಅಪ್ ಯೋಜನೆಯ ಮೂಲಕ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಹಣದ ನೆರವು.
• ನೂತನ 4 ಕಾರ್ಮಿಕ ಕೋರ್ಟ್‍ಗಳ ಸ್ಥಾಪನೆಗೆ ನಿರ್ಧಾರ.
• ರಾಷ್ಟ್ರೀಯ ಕ್ರೀಡಾ ಶಿಕ್ಷಣ ಪ್ರಾಧಿಕಾರ ನಿರ್ಮಾಣ ಹಾಗೂ 10ಲಕ್ಷ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ 3ಡಿ ಪ್ರಿಂಟಿಂಗ್ ಅಧ್ಯಯನಕ್ಕೆ ಯುವಕರಿಗೆ ನೆರವು.
• ಸ್ವಚ್ಛ ಭಾರತ ಯೋಜನೆಯಡಿ 9.6 ಕೋಟಿ ಶೌಚಾಲಯ ನಿರ್ಮಾಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ.
• ಐಐಟಿ, ಐಐಎಂ, ಐಐಎಸ್‍ಸಿ ಭಾರತದ ಮೂರು ವಿದ್ಯಾಸಂಸ್ಥೆಗಳನ್ನು ವಿಶ್ವಮಟ್ಟದ ಸಂಸ್ಥೆಯನ್ನಾಗಿಸಲು 400 ಕೋಟಿ ಅನುಧಾನ.
• ರಾಷ್ಟ್ರೀಯ ಸಂಶೋಧನಾ ಪೌಂಡೇಶನ್ ಸ್ಥಾಪನೆ.
• ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು.
• 1,2,5,10 ಹಾಗೂ 20ರೂ ನಾಣ್ಯ ಶೀಘ್ರದಲ್ಲೇ ಬಿಡುಗಡೆ.
• ಗ್ಯಾನ್ ಯೋಜನೆಯ ಮೂಲಕ ಐಐಎಂ, ಐಐಟಿ, ಐಐಎಸ್‍ಸಿ ಜಂಟಿ ಅಧ್ಯಯನ.
• ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಏಕ ರೀತಿಯ ಜೀವನಕ್ಕೆ ಒತ್ತು ನೀಡಲಾಗುವುದು.
• ಸಬ್ ಅರ್ಬನ್ ರೈಲು ಯೋಜನೆಗಳಿಗೆ ಒತ್ತು ನೀಡಲಾಗುವುದು. ಸರಕು ಸಾಗಾಣೆ ರೈಲುಗಳಿಗೆ ಪ್ರತ್ಯೇಕ ಅಳಿಗಳ ನಿರ್ಮಾಣ ಹಾಗೂ ಮೆಟ್ರೋ ರೈಲು ಉತ್ತೇಜಿಸಲು ಪಿಪಿಪಿ ಮಾದರಿ ಯೋಜನೆಗೆ ನಿರ್ಮಾಣ.
• ತೆರಿಗೆ ಪಾವತಿಗೆ ಪಾನ್ ಕಾರ್ಡ್ ಬದಲು ಆಧಾರ್ ಕಾರ್ಡ್ ಬಳಕೆ.
• ನೇರ ತೆರಿಗೆ ಸಂಗ್ರಹದಲ್ಲಿ ಶೇ.78ರಷ್ಟು ಏರಿಕೆ.
• ಇ-ವಾಹನ ಖರೀದಿಸುವವರಿಗೆ ತೆರಿಗೆಯಲ್ಲಿ ರಿಯಾಯಿತಿ.
• 5ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ತೆರಿಗೆ ಆದಾಯ ನೀಡುವಂತಿಲ್ಲ.
• ವಾರ್ಷಿಕ ವರಮಾನ 400ಕೋಟಿ ಇರುವವರಿಗೆ ಶೇ 25ರಷ್ಟು ತೆರಿಗೆ.
• ಎಲೆಕ್ಟ್ರಿಕ್ ಕಾರುಗಳಿಗೆ ಶೇಕಡಾ 5ರಷ್ಟು ಜಿಎಸ್‍ಟಿ.
• ಆಧಾರ್ ಕಾರ್ಡ್ ತೋರಿಸಿ ಐಟಿ ರಿಟರ್ನ್ ಸಲ್ಲಿಸಬಹುದು.
• ಜಿಎಸ್‍ಟಿಯಿಂದಾಗಿ 17 ತೆರಿಗೆಗಳು, 30 ನೀತಿಗಳು ರದ್ದಾಗಿವೆ.
• ರೂ 45 ಲಕ್ಷದ ಮನೆ ಖರೀದಿಸುವವರಿಗೆ 1.5 ಲಕ್ಷ ತೆರಿಗೆ ವಿನಾಯಿತಿ.
• ರಕ್ಷಣಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ರದ್ದು,
• ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ತೆರಿಗೆ ವಿನಾಯಿತಿ.
• ಆಮದಾಗುವ ಪುಸ್ತಕಳಿಗೆ ಶೇ. 5ರಷ್ಟು ತೆರಿಗೆ.
• ಶಸ್ತ್ರಾಚಿಕಿತ್ಸಾ ಉಪಕರಣಗಳಿಗೆ ತೆರಿಗೆ ವಿನಾಯಿತಿ.
• ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ 1 ರೂ ಸೆಸ್ ಏರಿಕೆ.
• ಬಂಗಾರದ ಮೇಲಿನ ಆಮದು ಸುಂಕ ಶೇ 10 ರಿಂದ 12.05 ಕ್ಕೆ ಏರಿಕೆ.
• ಆದಾಯ ತೆರಿಗೆ ಪಾವತಿಸುವಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
• ಡಿಜಿಟಲ್ ಪೇಮೆಂಟ್‍ಗೆ ಉತ್ತೇಜನ, ಕ್ರೆಡಿಟ್ ಕಾರ್ಡ್ ಪೇಮೆಂಟ್‍ಗಳ ಮೇಲೆ ಶುಲ್ಕ ಇಲ್ಲ.










