ಕೊಳ್ಳೇಗಾಲದ ರಸ್ತೆಗೆ ಪುನೀತ್ ಹೆಸರು ನಾಮಕರಣ…

55
firstsuddi

ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲದ ರಸ್ತೆಗೆ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಅಚ್ಗಾಳ್ ಸರ್ಕಲ್ ನಿಂದ ತಾಲೂಕು ಪಂಚಾಯತ್ ವೃತ್ತದವರಗಿರುವ ಸುಮಾರು ಒಂದು ಕಿ.ಮೀ ಉದ್ದದ ರಸ್ತೆಗೆ “ರಾಜರತ್ನ ಪುನೀತ್ ರಾಜ್ ಕುಮಾರ್” ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ಸ್ಥಳೀಯ ಶಾಸಕ ಎನ್.ಮಹೇಶ್ ಅವರು ನಾಮಫಲಕದ ಬೋರ್ಡ್ ಗೆ ಪೂಜೆ ಸಲ್ಲಿಸಿ ಅನಾವರಣ ಮಾಡಿದರು. ಬಳಿಕ ಮಾತನಾಡಿದ ಅವರು ಡಾ.ರಾಜ್ ಕುಮಾರ್ ಕುಟುಂಬದವರು ದೇಶ ಹಾಗೂ ರಾಜ್ಯಕ್ಕೆ ಸಾಂಸ್ಕೃತಿಕ, ಸಾಮಾಜಿಕ ರಾಯಭಾರಿಗಳಾಗಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರಲ್ಲದೆ, ಇಂತಹ ಕುಟುಂಬದ ಋಣ ತೀರಿಸಲು ಸಾಧ್ಯವಿಲ್ಲ ಎಂದರು.