ಗುಡ್ಡ ಕುಸಿದು ಆರು ದಿನದ ಬಳಿಕ ಅರ್ಧ ಕಿ.ಮೀ ದೂರದಲ್ಲಿ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ಪತ್ತೆ…

281
firstsuddi

ಕೊಡಗು : ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ತಲಾಕಾವೇರಿಯ ಬ್ರಹ್ಮಗಿರಿ ಸಮೀಪ ಭಾರಿ ಮಳೆಯಿಂದ ಗುಡ್ಡ ಕುಸಿತವಾಗಿ ನಾಪತ್ತೆಯಾಗಿದ್ದ ತಲಾಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಗುಡ್ಡ ಕುಸಿದು ಆರು ದಿನದ ಬಳಿಕ ಪ್ರಪಾತದಲ್ಲಿ ಅರ್ಚಕರ ಮೃತದೇಹ ಪತ್ತೆಯಾಗಿದೆ. ಕಳೆದ 6 ದಿನಗಳಿಂದ ಮಳೆಯನ್ನು ಲೆಕ್ಕಿಸದೆ ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಲೇ ಇದ್ದು, ಇನ್ನೂ ಮೂವರ ಮೃತದೇಹ ಪತ್ತೆಯಾಗಬೇಕಿದೆ. ಅರ್ಚಕರ ಮೃತದೇಹವು ಮನೆಯಿದ್ದ ಸ್ಥಳದಿಂದ ಅರ್ಧ ಕಿ.ಮೀ ದೂರದಲ್ಲಿರುವ ಕಂದಕದಲ್ಲಿ ಪತ್ತೆಯಾಗಿದ್ದು, ರಕ್ಷಣಾ ಸಿಬ್ಬಂದಿಗಳು ಹರಸಾಹಸಪಟ್ಟು ಮೃತದೇಹವನ್ನು ಹೊರತೆಗೆದಿದ್ದಾರೆ. ಇಂದು ಬೆಳಿಗ್ಗೆ ಕೂಡಾ ಕಾರ್ಯಾಚರಣೆ ವೇಳೆ ಅರ್ಚಕರು ಬಳಸುತ್ತಿದ್ದ ಎರಡು ಕಾರುಗಳು ಪತ್ತೆಯಾಗಿದ್ದವು.