ಚಿಕ್ಕಮಗಳೂರು : ಜೆಸಿಐ ಪದಾಧಿಕಾರಿಗಳು ಮತ್ತು ಸದಸ್ಯರು ಸೇವೆಗೆ ಒತ್ತು ನೀಡಬೇಕು : ಅನೀಷ್ ಸಿ ಮ್ಯಾಥ್ಯು.

257
firstsuddi

ಚಿಕ್ಕಮಗಳೂರು : ಜೆಸಿಐ ಪದಾಧಿಕಾರಿಗಳು ಮತ್ತು ಸದಸ್ಯರು ಸೇವೆಗೆ ಒತ್ತು ನೀಡಬೇಕು ಎಂದು ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಅನೀಷ್ ಸಿ ಮ್ಯಾಥ್ಯು ಸಲಹೆ ಮಾಡಿದರು.
ಮೂಡಿಗೆರೆ ತಾಲ್ಲೂಕಿನ ಜನ್ನಾಪುರದಲ್ಲಿ ನಡೆದ ಸಂತೋಷ್ ನೇತೃತ್ವದ ಜೆಸಿಐ ಸಮೃದ್ಧಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಆಸ್ತಿ, ಅಧಿಕಾರ, ಹಣ, ಅಂತಸ್ತು ಎಷ್ಟಿದ್ದರೂ ಸಾಲುವುದಿಲ್ಲ. ಅವು ತೃಪ್ತಿ ನೀಡುವುದಿಲ್ಲ. ಆದರೆ ಅಸಹಾಯಕರು, ದೀನರು, ದುರ್ಬಲರ, ಸೇವೆ ನಮ್ಮ ಬದುಕನ್ನು ಸಾರ್ಥಕಗೊಳಿಸುವುದರ ಜೊತೆಗೆ ಮಾನಸಿಕ ಶಾಂತಿ ಮತ್ತು ನೆಮ್ಮದಿ ನೀಡುತ್ತದೆ ಎಂದು ಕಿವಿ ಮಾತು ಹೇಳಿದರು.

ಸಮಾಜ ಸೇವೆಯಿಂದ ಮಾತ್ರ ನಮ್ಮ ಹೆಸರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಜೆಸಿಐ ಪದಾಧಿಕಾರಿಗಳು ಮತ್ತು ಸದಸ್ಯರು ಇದನ್ನು ಅರಿಯಬೇಕು. ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಸಮಾಜ ಸೇವೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಸಂತೋಷ್ ನೇತೃತ್ವದ ನೂತನ ಪದಾಧಿಕಾರಿಗಳ ತಂಡಕ್ಕೆ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಭೋದಿಸಲಾಯಿತು. ಬೆಟ್ಟದ ಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಡಾ|| ಫೈರೋಜ್ ಅಹಮದ್ ಅವರನ್ನು ಸನ್ಮಾನಿಸಲಾಯಿತು.
ಜೆಸಿಐ ಬಣಕಲ್ ವಿಸ್ಮಯದ ಅಧ್ಯಕ್ಷ ರವಿ ವಾಟೇಖಾನ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಉಪಾಧ್ಯಕ್ಷ ಡಾ|| ನವೀನ್ ಲಾಯ್ಡ್ ಮಿಸ್ಕಿತ್. ವಲಯಾಧ್ಯಕ್ಷೆ ಸಮತಾ ಮಿಸ್ಕಿತ್. ಉಪಾಧ್ಯಕ್ಷ ಪ್ರಸಾದ್. ವಿಸ್ತರಣಾಧಿಕಾರಿ ದಿನೇಶ್. ಕಾರ್ಯದರ್ಶಿ ಸುರೇಂದ್ರ. ಉಪಸ್ಥಿತರಿದ್ದರು.