ಜನನಿಬಿಡ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ…

64
firstsuddi

ಬೆಂಗಳೂರು : ವ್ಯಕ್ತಿಯೊಬ್ಬರು ಜನನಿಬಿಡ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಪರೆಡ್ಡಿ ಪಾಳ್ಯ ಸರ್ಕಲ್ ಬಳಿ ತಡರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.

ಮಾದೇವ(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 15 ವರ್ಷದ ಹಿಂದೆ ಯಶೋಧಮ್ಮ ಎಂಬಾಕೆ ಜೊತೆ ವಿವಾಹವಾಗಿದ್ದ ಮಾದೇವ, ಪ್ರತಿ ದಿನ ಕುಡಿದು ಕಿರಿಕ್ ಮಾಡುತ್ತಿದ್ದ. ಗಂಡನ ಗಲಾಟೆಯಿಂದಾಗಿ ಹಲವು ಬಾರಿ ಯಶೋಧಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ನಿನ್ನೆ ಬೆಳಗ್ಗೆ ಪತ್ನಿ ಬಳಿ 150 ರೂಪಾಯಿಗಾಗಿ ಜಗಳ ತೆಗೆದಿದ್ದ ಮಾದೇವ ಚೆನ್ನಾಗಿ ಕುಡಿದಿದ್ದ. ಹೀಗಾಗಿ ಪತ್ನಿ ಕರೆ ಮಾಡಿ ಪೊಲೀಸರಿಗೆ ವಿಚಾರ ತಿಳಿಸಿದ್ದಳು. ಮನೆ ಬಳಿ ಬಂದ ಪೊಲೀಸರು ಮೃತ ಮಾದೇವನಿಗೆ ಬುದ್ದಿ ಹೇಳಿದ್ರಂತೆ. ನಂತರ ಮಾದೇವ ನೇರವಾಗಿ ಪಾಪರೆಡ್ಡಿ ಪಾಳ್ಯ ಸರ್ಕಲ್ ಬಳಿ ಬಂದು ಮರಕ್ಕೆ ನೇಣು ಹಾಕಿಕೊಂಡಿದ್ದಾನೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದವರಾದ ಮೃತ ಮಾದೇವ ಮೂರು ಮದುವೆಯಾಗಿದ್ದನೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.