ಡಾ.ಮೇಘನಾ ರೆಡ್ಡಿಗೆ `ಮಿಸೆಸ್ ಕರ್ನಾಟಕ 2022′ ಕಿರೀಟ…

75
firstsuddi

ಬೆಂಗಳೂರು: ವಿವಾಹಿತ ಭಾರತೀಯ ಮಹಿಳೆಯರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಡಾ.ಮೇಘನಾ ರೆಡ್ಡಿ ಅವರು`ಮಿಸೆಸ್ ಕರ್ನಾಟಕ 2022′ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಫೆಮಿನಾ ಮಿಸ್ ಇಂಡಿಯಾದ ಪ್ರಾಚಿ ಮಿಶ್ರಾ, ಗರ್ಭಿಣಿ ಮಹಿಳೆಯರ ಆರೋಗ್ಯ ಸುರಕ್ಷತೆ ತಜ್ಲೆ ಲೀನಾ ಸವೂರ್, ಡಾ.ಮಂಜುಶ ಪಾಟೀಲ್, ಸೌತ್ ಇಂಡಿಯಾ ಗಾರ್ಮೆಂಟ್ ಉತ್ಪಾದಕರ ಸಂಘದ ಅಧ್ಯಕ್ಷ ಅನುರಾಗ್ ಸಿಂಗ್ಲಾ ಸೌಂದರ್ಯ ಸ್ಪರ್ಧೆಗೆ ಚಾಲನೆ ನೀಡಿದರು. ಮಿಸೆಸ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ 10 ಮಹಿಳೆಯರು ಆಯ್ಕೆಯಾದರು. ಈ ಪೈಕಿ ಪ್ರಥಮ ಸ್ಥಾನ ಡಾ. ಮೇಘನಾ ರೆಡ್ಡಿ, ದ್ವಿತೀಯ ಸ್ಥಾನ ಬಿಂದಿ ರಮೇಶ್, ತೃತೀಯ ಸ್ಥಾನ ನೌಶೀನ್ ಶರೀಫ್ ಅವರು ಪಡೆದರು.

ಈ ಕಾರ್ಯಕ್ರಮದಲ್ಲಿ ತಾಯಿಯ ಎದೆ ಹಾಲಿನ ಮಹತ್ವ ಮತ್ತು ಅದರಿಂದ ಆಗುವ ಪ್ರಯೋಜನ, ಮಕ್ಕಳ ಬೆಳವಣಿಗೆಗೆ ಎದೆ ಹಾಲಿನ ಅವಶ್ಯಕತೆ ಮತ್ತು ತಾಯಿಯಾಗುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತೆ ಬಗ್ಗೆ ಮಾಹಿತಿ ನೀಡಲಾಯಿತು.