ಡಿ.ಕೆ. ಶಿವಕುಮಾರ್ ಅವರ ಶತಾಯುಷಿ ಅಜ್ಜಿ ನಿಧನ…

65
firstsuddi

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಅವರ ಶತಾಯುಷಿ ಅಜ್ಜಿ ನಿಂಗಮ್ಮ ಅವರು ಜಿಲ್ಲೆಯ ಕನಕಪುರದ ಹಾರೋಹಳ್ಳಿಯ ದಯಾನಂದಸಾಗರ ಆಸ್ಪತ್ರೆಯಲ್ಲಿ ಇಂದು ಬೆಳಗಿವ ಜಾವ ನಿಧನರಾಗಿದ್ದಾರೆ. ನಿಂಗಮ್ಮ ಅವರಿಗೆ (106) ವರ್ಷ ವಯಸ್ಸಾಗಿತ್ತು.

ನಿಂಗಮ್ಮ ಅವರ ಅಂತ್ಯಕ್ರಿಯೆ ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಶುಕ್ರವಾರ ಸಂಜೆ 4.30ಕ್ಕೆ ನಡೆಯಲಿದೆ. ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಡಿ.ಕೆ. ಶಿವಕುಮಾರ್ ಅವರು ಇಂದು ಕಲಾಪದಲ್ಲಿ ಭಾಗವಹಿಸುವುದನ್ನು ಮೊಟಕುಗೊಳಿಸಿ, ಬೆಳಗಾವಿಯಿಂದ 12 ಗಂಟೆ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದು ನಂತರ ಅಲ್ಲಿಂದ ದೊಡ್ಡಾಲಹಳ್ಳಿಗೆ ತೆರಳಿ, ಅಜ್ಜಿಯವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.