ನಾಳೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಲಿದ್ದಾರೆ ಮೋದಿ.

52
firstsuddi

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಲಿದ್ದಾರೆ.

ಮೋದಿ ನಾಳೆ ಬೆಳಗ್ಗೆ 11:35ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕಾಲೇಜು ಮೈದಾನಕ್ಕೆ ಬರಲಿದ್ದಾರೆ. ಐಬಿ ವೃತ್ತದಿಂದ ನಂದ ಚಿತ್ರಮಂದಿರದವರೆಗೆ 2 ಕಿಲೋ ಮೀಟರ್ ದೂರ ರೋಡ್ ಶೋ ನಡೆಸಿ ಮತ್ತೆ ಬೂದನೂರಿನಲ್ಲಿ 50 ಮೀಟರ್ ದೂರ ರಸ್ತೆಯಲ್ಲಿಯೇ ನಡೆದು ರೋಡ್ ಶೋ ಮಾಡಲಿದ್ದಾರೆ. ಬಳಿಕ ಗೆಜ್ಜಲಗೆರೆಯ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ.

ಇನ್ನು ನೂತನ ದಶಪಥ ಹೈವೇ ಬಗ್ಗೆ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದು, ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತದೆ ಎಂದು ಮೋದಿ ಬಣ್ಣಿಸಿದ್ದಾರೆ.

ಯೋಜನೆಯು ಎನ್‍ಹೆಚ್-275 ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ ಆರು-ಪಥವನ್ನು ಒಳಗೊಂಡಿರುತ್ತದೆ. 118 ಕಿಲೋಮೀಟರ್ ಉದ್ದದ ಈ ಹೆದ್ದಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭಾರತ್ ಮಾಲಾ ಯೋಜನೆಯಡಿ ಸುಮಾರು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 6 ಲೇನ್ ಗಳನ್ನು ಪ್ರಮುಖ ಕ್ಯಾರೇಜ್ ವೇ ಆಗಿ ಗುರುತಿಸಲಾಗಿದ್ದು, ಎರಡೂ ಬದಿಗೆ 2 ಲೇನ್ ನ ಸರ್ವೀಸ್ ರಸ್ತೆ ಇರಲಿದೆ.