ಪಬ್‍ಜಿ ಆಡಬೇಡ ಎಂದು ಪೋಷಕರು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಯುವಕ ಆತ್ಮಹತ್ಯೆ…

162
firstsuddi

ಗದಗ : ಪಬ್‍ಜಿ ಆಡಬೇಡ ಎಂದು ಪೋಷಕರು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಕಾರ್ತಿಕ್ ಬಬಲಿ(17) ಆತ್ಮಹತ್ಯೆಗೆ ಶರಣಾದ ಯುವಕ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕಾರ್ತಿ ಯಾವಾಗಲು ಪಬ್‍ಜಿ ಗೇಮ್‍ನಲ್ಲಿ ನಿರತನಾಗಿದ್ದನು. ಇತ್ತ ಆನ್‍ಲೈನ್ ಕ್ಲಾಸ್ ನಡೆಯುತ್ತಿದ್ದು, ತರಗತಿ ಕೇಳುವ ನೆಪದಲ್ಲಿ ಮೊಬೈಲ್‍ನಲ್ಲಿ ಪಬ್‍ಜಿ ಆಟವಾಡುತ್ತಿದ್ದ. ಇದನ್ನು ಗಮನಿಸಿದ ಪೋಷಕರು ಓದುವುದು ಬಿಟ್ಟು ಗೇಮ್ ಆಡುತ್ತೀಯ ಎಂದು ಯುವಕನ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದಾರೆ. ಯುವಕ ಎಷ್ಟು ಕೇಳಿದರೂ ಪೋಷಕರು ಮೊಬೈಲ್ ಕೊಡದೆ ಇದ್ದುದರಿಂದ ಯುವಕ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.