ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಭಾವಿಸಿ : ವರಸಿದ್ದಿ ಗೋಪಾಲ್.

80
firstsuddi

ಚಿಕ್ಕಮಗಳೂರು : ಪರಿಸರ ಸಂರಕ್ಷಣೆಯನ್ನು ಪ್ರತಿಯೊಬ್ಬರೂ ತಮ್ಮ ಕರ್ತವ್ಯವೆಂದು ಭಾವಿಸಬೇಕು ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ಗೋಪಾಲ್ ಸಲಹೆ ನೀಡಿದರು.

ಜಿಲ್ಲಾ ಬಿಲ್ಲವ ಯುವ ವೇದಿಕೆ ನಗರದ ಬಸವನಹಳ್ಳಿ ಬಾಲಕಿಯರ ಶಾಲೆ ಮುಂಭಾಗ ನಿನ್ನೆ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜವಾಬ್ದಾರಿ ಮತ್ತು ಮಿತಿಮೀರಿದ ದುರಾಸೆಯಿಂದ ಪರಿಸರವಿಂದು ಹಾಳಾಗಿದೆ. ಈಗಲಾದರೂ ನಾವು ಎಚ್ಚೆತ್ತು ಗಿಡಮರಗಳನ್ನು, ಅರಣ್ಯಗಳನ್ನು ಬೆಳಸದಿದ್ದಲ್ಲಿ ಭವಿಷ್ಯ ಘೋರವಾಗುತ್ತದೆ ಎಂದು ಎಚ್ಚರಿಸಿದರು.

ಬಿಲ್ಲವ ಸಂಘದ ಜಿಲ್ಲಾಧ್ಯಕ್ಷ ಗುಣಶೇಖರ್ ಮಾತನಾಡಿ ಹಸಿರೇ ನಮ್ಮ ಉಸಿರು ಅದನ್ನು ಮುತುವರ್ಜಿಯಿಂದ ಉಳಿಸಿಕೊಂಡರೆ ನಮ್ಮ ಬದುಕು ಹಸನಾಗುತ್ತದೆ ಎಂದರು.

ವಿಶ್ವ ಪರಿಸರ ದಿನದ ಅಂಗವಾಗಿ ಶಾಲೆಯ ಮುಂಭಾಗದ ರಸ್ತೆ ಬದಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಬಿಲ್ಲವ ಯುವ ವೇದಿಕೆ ಜಿಲ್ಲಾಧ್ಯಕ್ಷ ವಿನೋದ್ ಕುಮಾರ್, ಗೌರವಾಧ್ಯಕ್ಷ ಎಂ.ಪಿ.ಶೇಖರ್, ಕಾರ್ಯದರ್ಶಿಗಳಾದ ಸಂತೋಷ್ ಕೋಟ್ಯಾನ್, ಕುಮಾರ್ ಬಿಲ್ಲವ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರಮೀಳಾ ಅರುಣ್, ಸಚಿನ್ ಉಪಸ್ಥಿತರಿದ್ದರು.