ಮಂಗಳೂರು: ನಗರದಲ್ಲಿ ಇಂದುಸುರಿದ ಭಾರಿ ಮಳೆಗೆ ಪುತ್ತೂರು ತಾಲೂಕಿನ ಗೋಳಿತೊಟ್ಟು ಬಾಲಮಂದಿರ ಬಳಿ ಮನೆಯೊಂದರ ಕಂಪೌಂಡ್ ಕುಸಿದು ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಪುತ್ತೂರು ತಾಲೂಕಿನ ಗೋಳಿತೊಟ್ಟು ನಿವಾಸಿ ಚಂದ್ರಶೇಖರ ಎಂಬವರ ಪತ್ನಿ ಶೋಭಾ(49) ಎಂದು ಗುರುತಿಸಲಾಗಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಭಾರಿ ಮಳೆಸುರಿಯುತ್ತಿದ್ದು, ಭಾರೀ ಮಳೆಯಿಂದಾಗಿ ಕಂಪೌಂಡ್ ಗೋಡೆ ಶಿಥಿಲಗೊಂಡಿದ್ದು ಶೋಭಾ ಅವರ ಮೇಲೆ ಮಗುಚಿಬಿದ್ದಿದೆ. ಇದರಿಂದ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.










