ಪೋಕ್ಸೋ ಪ್ರಕರಣ – 2ನೇ ಆರೋಪಿ ಮುರುಘಾ ಮಠದ ವಾರ್ಡನ್ ರಶ್ಮಿ ಬಂಧನ…

59
firstsuddi

ಚಿತ್ರದುರ್ಗ : ಮುರುಘಾ ಮಠದ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ವಾರ್ಡನ್ ರಶ್ಮಿ ಬಂಧನವಾಗಿದೆ ಎಂದು ಚಿತ್ರದುರ್ಗ ಎಸ್​ಪಿ ಕೆ ಪರಶುರಾಮ್‌  ಮಾಹಿತಿ ನೀಡಿದ್ದಾರೆ.

ಮುರುಘಾ ಮಠದಲ್ಲಿ ಲೇಡಿ ವಾರ್ಡನ್ ಆಗಿರುವ ರಶ್ಮಿಯನ್ನು ನಿನ್ನೆ ರಾತ್ರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇಂದು ಬಂಧಿಸಿ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಿದ್ದಾರೆ.

ಮುರುಘಾ ಶರಣರು, ವಾರ್ಡನ್ ರಶ್ಮಿ ಸೇರಿದಂತೆ ಮತ್ತೆ ಮೂವರ ವಿರುದ್ಧ ಪೋಕ್ಸೋ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದೀಗ ಇಬ್ಬರ ಬಂಧನವಾಗಿದೆ.

ಸ್ವಾಮೀಜಿ ಅವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ರಶ್ಮಿ ಹೇಳುತ್ತಿದ್ದರು ಎಂದು ಸಂತ್ರಸ್ತ ಬಾಲಕಿಯರು ವಿಚಾರಣೆಯಲ್ಲಿ ಆರೋಪ ಮಾಡಿದ್ದಾರೆ.