ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ – ದೂರು ದಾಖಲು…

76
firstsuddi

ಚಿತ್ರದುರ್ಗ : ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ಹನಿಟ್ರ್ಯಾಪ್ ಗೆ ಯತ್ನ ನಡೆದಿದೆ. ಮೊಬೈಲ್ ನಂಬರ್ ಒಂದರಿಂದ ವಿಡಿಯೋ ಕಾಲ್ ಮೂಲಕ ಶಾಸಕರನ್ನು ಸಿಲುಕಿಸುವ ಯತ್ನ ಮಾಡಲಾಗಿದೆ.

ಬೆತ್ತಲೆಯಾಗಿದ್ದ ಯುವತಿಯೊಬ್ಬಳು ಶಾಸಕರಿಗೆ ವಿಡಿಯೋ ಕಾಲ್ ಮಾಡಿದ್ದಾಳೆ. ಈ ಸಂಬಂಧ ಶಾಸಕರು ಇದೀಗ ಚಿತ್ರದುರ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಚಿತ್ರದುರ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ತಿಪ್ಪಾರೆಡ್ಡಿ, ಅಪರಿಚಿತ ಮಹಿಳೆಯಿಂದ ವಾಟ್ಸಪ್ ನಲ್ಲಿ ವಿಡಿಯೋ ಕಾಲ್ ಬಂದಿತ್ತು. ಕ್ಷೇತ್ರದ ಜನರೋ ಅಥವಾ ಸಂಬಂಧಿಕರೋ ಎಂದು ಕಾಲ್ ರಿಸೀವ್ ಮಾಡಿದ್ದೆ. ಆದರೆ ಅವರ ಭಾಷೆ ನನಗೆ ಅರ್ಥವಾಗಿಲ್ಲ. ಆದರೆ ಈ ರೀತಿ ಆಗಿರುವುದು ನನ್ನ ಗಮನಕ್ಕೆ 2 ಬಾರಿ ಬಂತು ಎಂದು ಹೇಳಿದರು.

ಆ ಸಮಯದಲ್ಲಿ ನನ್ನ ಪತ್ನಿಗೆ ತಿಳಿಸಿ ತಕ್ಷಣ ಆ ನಂಬರ್ ಅನ್ನು ಬ್ಲಾಕ್ ಮಾಡಿಸಿದೆ. ನಂತರ ಈ ಬಗ್ಗೆ ಎಸ್ ಪಿಗೂ ಮಾಹಿತಿ ನೀಡಿದೆ. ಅವರು ತನಿಖೆ ನಡೆಸುತ್ತಿದ್ದಾರೆ ಜೊತೆಗೆ ವಿಡಿಯೋ ಕಾಲ್ ಬಂದ ನಂಬರ್ ನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಇದು ಓರಿಸ್ಸಾ ಅಥವಾ ರಾಜಸ್ಥಾನದಿಂದ ಬಂದ ನಂಬರ್ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಘಟನೆಯ ಕುರಿತು ಯಾರ ಮೇಲೂ ನನಗೆ ಅನುಮಾನವಿಲ್ಲ. ನನಗೆ ಯಾರು ವಿರೋಧಗಳಿಲ್ಲ. ಘಟನೆಗೆ ಸಂಬಂಧಿಸಿ ಸೈಬರ್ ಠಾಣೆಗೆ ದೂರು ನೀಡಿದ್ದೇನೆ ಎಂದರು.