ಮಂಗಳೂರು : ಅಪಾರ್ಟ್‍ಮೆಂಟ್ ಕಾಂಪೌಂಡ್ ಮೇಲೆ ಉಗ್ರ ಸಂಘಟನೆ ಪರ ಮತ್ತೊಂದು ಬರಹ ಪತ್ತೆ…

138
firstsuddi

ಮಂಗಳೂರು : ಮಂಗಳೂರಿನ ಅಪಾರ್ಟ್‍ಮೆಂಟ್ ಕಾಂಪೌಂಡ್ ಮೇಲೆ ಉಗ್ರ ಸಂಘಟನೆ ಪರ ಬರವಣಿಗೆ ಬರೆದ ದೇಶದ್ರೋಹಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಗೋಡೆ ಬರಹ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್‍ಮೆಂಟ್ ಕಾಂಪೌಂಡ್ ಮೇಲೆ ಉಗ್ರ ಸಂಘಟನೆಗಳಿಗೆ ಜಿಂದಾಬಾದ್ ಎಂದು ಗೋಡೆ ಬರಹವನ್ನು ಬರೆಯಲಾಗಿತ್ತು. ಇದರ ತನಿಖೆ ನಡೆಸಿದ ಪೊಲೀಸರು ಹೋಂಡಾ ಆಕ್ಟೀವಾದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವನ್ನು ಎಸಗಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಗೋಡೆ ಬರಹ ಬರೆದ ಆ ಇಬ್ಬರು ದೇಶದ್ರೋಹಿಗಳನ್ನು ಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಮತ್ತೊಂದು ಗೋಡೆ ಬರಹ ಪತ್ತೆಯಾಗಿದ್ದು,  ’Gustuk e Rasool ek hi saza sar tan say juda’ ಎಂದು ಬರೆದಿದ್ದು, ಇದರ ಅರ್ಥ ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುತ್ತದೆ ಎಂಬುವುದಾಗಿದೆ.