ಮಂಡ್ಯ ಚುನಾವಣೆಯಲ್ಲಿ ಯಾರೂ ಗೆಲ್ಲುತ್ತಾರೆ ಎಂದು ಮಕ್ಕಳ ದೇವರ ಆಟದ ವೀಡಿಯೋ ವೈರಲ್…

215
firstsuddi

ಮಂಡ್ಯ : ಲೋಕಸಭಾ ಚುನಾವಣೆಯಲ್ಲಿ ಕುತೂಹಲ ಮೂಡಿಸಿದ ಮಂಡ್ಯ ಕ್ಷೇತ್ರದಲ್ಲಿ ಯಾರೂ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಮಕ್ಕಳು ದೇವರ ಆಟವನ್ನು ಆಡುತ್ತಿರುವ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ಆಟದ ವೀಡಿಯೋ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಮೈ ಮೇಲೆ ದೇವರು ಬಂದಂತೆ ಒಬ್ಬ ಬಾಲಕ ನಟನೆ ಮಾಡಿದ್ದು, ಉಳಿದ ಮಕ್ಕಳು ತಮಟೆ ಬಾರಿಸುತ್ತಿದ್ದು, ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಬಂದು ಮಂಡ್ಯದಲ್ಲಿ ಗೆಲ್ಲುವುದು ಸುಮಲತಾನಾ? ಅಥವಾ ನಿಖಿಲ್ ಕುಮಾರಸ್ವಾಮಿನಾ? ಎಂದು ಕೇಳಿದ ಪ್ರಶ್ನೆಗೆ ದೇವರು ಬಂದಂತೆ ಆಡುತ್ತಿರುವ ಬಾಲಕ ಸುಮಲತಾ ಗೆಲ್ಲುತ್ತಾರೆ ಎಂದು ಹೇಳಿರುವ ವೀಡಿಯೋ ವೈರಲ್ ಆಗಿದೆ.