ಮಗುವಿಗೆ ಹಾಲುಣಿಸುತ್ತಿರುವಾಗ ಪತ್ನಿಯ ಕತ್ತು ಸೀಳಿದ ಪಾಪಿ ಪತಿ!

91
firstsuddi

ಕಲಬುರಗಿ : ಮಗುವಿಗೆ ಹಾಲುಣಿಸುತ್ತಿರುವಾಗ ಪತ್ನಿಯ ಕತ್ತು ಸೀಳಿ ಪತಿ ಕೊಲೆಗೈದಿರುವ ಘಟನೆ ನಗರದ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.

ನಸೀಮಾ ಬೇಗಂ (35) ಕೊಲೆಯಾದ ಮಹಿಳೆ. ಕುಡಿದ ಮತ್ತಿನಲ್ಲಿ ಮಗುವಿಗೆ ಹಾಲುಣಿಸುತ್ತಿರುವಾಗ ಇಬ್ರಾಹಿಂ ಮಾರಕಾಸ್ತ್ರದಿಂದ ನಸೀಮಾ ಕತ್ತುಸೀಳಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಕುಡಿತದ ದಾಸನಾಗಿದ್ದ ಆರೋಪಿ ಇಬ್ರಾಹಿಂ ಪತ್ನಿ ನಸೀಮಾಗೆ ತವರು ಮನೆಯಿಂದ ಮದ್ಯ ಕುಡಿಯೋಕೆ ಹಣ ತರುವಂತೆ ಪೀಡಿಸುತ್ತಿದ್ದನಂತೆ. ಸದ್ಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಆರೋಪಿ ಇಬ್ರಾಹಿಂನನ್ನ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.