ಬೆಂಗಳೂರು: ಅತ್ಯಾಚಾರದ ಸಂತ್ರಸ್ತೆ ಹಾಗೂ ಆರೋಪಿ ಇಬ್ಬರೂ ಪರಸ್ಪರ ಮದುವೆಯಾಗಲು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಇತ್ತೀಚೆಗೆ ಸಂತ್ರಸ್ತ ಯುವತಿ ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದಳು. ‘ನಾನೀಗ ವಯಸ್ಕಳಾಗಿದ್ದೇನೆ. ಆರೋಪಿಯೊಂದಿಗೆ ವಿವಾಹವಾಗುವುದಾಗಿ ಹೇಳಿ, ಇದಕ್ಕೆ ಆರೋಪಿಯೂ ಸಹ ಒಪ್ಪಿರುವುದಾಗಿ ಸಂತ್ರಸ್ತ ಯುವತಿ ತಿಳಿಸಿದ್ದರು. ಹೀಗಾಗಿ ಪ್ರಕರಣ ರದ್ದುಪಡಿಸಲು ಅತ್ಯಾಚಾರ ಸಂತ್ರಸ್ತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಸಂತ್ರಸ್ತ ಯುವತಿ ಮನವಿ ಪತ್ರವನ್ನು ಗಮನಿಸಿದ ಹೈಕೋರ್ಟ್, ಆರೋಪಿಯನ್ನು ವಿಚಾರಣೆ ಮಾಡಿದ್ದು, ಜೈಲಿನಿಂದ ಹಾಜರುಪಡಿಸಿದ್ದ ಆರೋಪಿಯಿಂದಲೂ ಮದುವೆಗೆ ಸಮ್ಮತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರ, ಪೋಕ್ಸೋ ಕೇಸ್ ರದ್ದುಪಡಿಸಿ, ಒಂದು ತಿಂಗಳೊಳಗೆ ವಿವಾಹವಾಗಬೇಕೆಂಬ ಷರತ್ತಿನೊಂದಿಗೆ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ರಿದ್ದ ಹೈಕೋರ್ಟ್ ಪೀಠ, ಕೇಸ್ ರದ್ದುಪಡಿಸಿ ಆದೇಶಿಸಿದೆ.
ಇನ್ನು ಈ ಪಕ್ರರಣ ಚಿಂತಾಮಣಿ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.










