ಮಹಾಮಾರಿ ಕೊರೊನಾ ಗೆದ್ದ ಬೆಂಗಳೂರಿನ 100 ವರ್ಷದ ಅಜ್ಜಿ…

189
firstsuddi

ಬೆಂಗಳೂರು : ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್‍ನಿಂದ ಜನತೆ ಆತಂಕಕ್ಕೀಡಾಗಿದ್ದು, ಈ ನಡುವೆ ಬೆಂಗಳೂರಿನಲ್ಲಿ 100 ವರ್ಷದ ಸೋಂಕಿತ ವೃದ್ಧೆ ಸೋಂಕಿನಿಂದ ಗುಣಮುಖರಾಗುವ ಮೂಲಕ ಇಡೀ ವೈದ್ಯ ಲೋಕಕ್ಕೆ ಸಂತಸ ಮೂಡಿಸಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದ ಅತ್ಯಂತ ಹಿರಿಯ ವಯಸ್ಸಿನ ಸೋಂಕಿತರಾಗಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ಮಾರ್ಸಿಲಿನ್ ಸಾಲ್ಡಾನಾ ಎಂಬ ಅಜ್ಜಿ ಜೂನ್ 18 ತಮ್ಮ ಹುಟ್ಟುಹಬ್ಬದ ದಿನದಂದೇ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ಅಜ್ಜಿಯ ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳಿಗೂ ಸೋಂಕು ತಗುಲಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಕೇವಲ 9 ದಿನದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ನಿನ್ನೆ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ವೈದ್ಯರು ಸಂತಸ ವ್ಯಕ್ತಪಡಿಸಿದ್ದಾರೆ.