ಮಾ.4ರಂದು ಶಾರದಾ ಮಠದಲ್ಲಿ ರಾಮಕೃಷ್ಣ ಪರಮಹಂಸರ 187ನೇ ಜನ್ಮ ದಿನಾಚರಣೆ…

113
firstsuddi

ಚಿಕ್ಕಮಗಳೂರು : ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 187ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಇಲ್ಲಿನ ಆದಿಶಕ್ತಿ ನಗರದ ಶಾರದಾ ಮಠದಲ್ಲಿ ಮಾ.4 ರಂದು ನಡೆಯಲಿದೆ.

ಜನ್ಮ ದಿನದ ಪ್ರಯುಕ್ತ ಬೆಳಿಗ್ಗೆ 5 ಗಂಟೆಗೆ ಮಂಗಳಾರತಿ, ಉಷಾ ಕೀರ್ತನೆ, ವಿಶೇಷ ಪೂಜೆ, 10 ಗಂಟೆಗೆ ಭಜನೆ, ವಿಷ್ಣುಸಹಸ್ರನಾಮ ಪಾರಾಯಣ, 10.30ಕ್ಕೆ ಮೂಲ ಮಂತ್ರ ಹೋಮ ಜರುಗಲಿದೆ.

11.15 ಕ್ಕೆ ಕುವೆಂಪು ವಿದ್ಯಾನಿಕೇತನ ಶಾಲೆಯ ಶಿಕ್ಷಕಿ ವಸುದಾ ಅವರಿಂದ ಶ್ರೀ ರಾಮಕೃಷ್ಣಪರಮಹಂಸರ ಬದುಕು, ಬರಹ ಮತ್ತು ಸಂದೇಶಗಳ ಕುರಿತು ಪ್ರವಚನ, 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಲಿದೆ ಎಂದು ಶ್ರೀ ಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕಾ ಶುಭವ್ರತಪ್ರಾಣಾ ಮಾತಾಜಿ ತಿಳಿಸಿದ್ದಾರೆ.