ಮೂಡಿಗೆರೆ : ಕಾರ್ಮಿಕರೊಬ್ಬರು ಕಳೆದುಕೊಂಡಿದ್ದ ಹಣವನ್ನು ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ಯುವಕ…

246
firstsuddi

ಕೊಟ್ಟಿಗೆಹಾರ : ಜಾವಳಿ ಮಲೆಮನೆ ರಸ್ತೆಯ ದೊಡ್ಡಿನಕೊಪ್ಪ ಸಮೀಪ ರಸ್ತೆಯಲ್ಲಿ ದಾವಣಗೆರೆ ಮೂಲದ ತೋಟ ಕಾರ್ಮಿಕರೊಬ್ಬರು ಕಳೆದುಕೊಂಡಿದ್ದ ಹಣವನ್ನು ಹಿಂದಿರುಗಿಸುವ ಮೂಲಕ ಜಾವಳಿಯ ಆಟೋ ಚಾಲಕ ಚಿದಂಬರ ಅವರು ಪ್ರಮಾಣಿಕತೆ ಮೆರೆದಿದ್ದಾರೆ.
ದಾವಣಗೆರೆ ಮೂಲದ ತೋಟ ಕಾರ್ಮಿಕರಾದ ಹೇಮಂತ್ ಅವರು ದೊಡ್ಡಿನಕೊಪ್ಪದಿಂದ ಜಾವಳಿಗೆ ಹೋಗುತ್ತಿರುವಾಗ 12500 ರೂ ಹಣವನ್ನು ಕಳೆದುಕೊಂಡಿದ್ದರು. ಅದೇ ಮಾರ್ಗವಾಗಿ ಸಾಗುತ್ತಿದ್ದ ಆಟೋ ಚಾಲಕ ಚಿದಂಬರ ಅವರಿಗೆ ಹಣ ಸಿಕ್ಕಿದ್ದು ಹಣ ಸಿಕ್ಕಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನು ಗಮನಿಸಿದ ಹೇಮಂತ್ ಅವರು ಚಿದಂಬರ ಅವರನ್ನು ಸಂಪರ್ಕಿಸಿ ಹಣ ಕಳೆದುಕೊಂಡಿರುವ ಬಗ್ಗೆ ತಿಳಿಸಿದ್ದು ಆಟೋ ಚಾಲಕ ಚಿದಂಬರ ಅವರು ತೋಟ ಕಾರ್ಮಿಕ ಹೇಮಂತ್ ಅವರಿಗೆ 12500 ಹಣವನ್ನು ಹಿಂದಿರುಗಿಸುವ ಮೂಲಕ ಪ್ರಮಾಣಿಕತೆ ಮೆರೆದರು. ಚಿದಂಬರ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.