ಮೂಡಿಗೆರೆ : ಗ್ರಾಮದೇವತೆ ಪರಿಮಳಮ್ಮ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ…

461
firstsuddi

ಮೂಡಿಗೆರೆ : ಪ್ರತಿ ವರ್ಷದಂತೆ ಈ ವರ್ಷವು ಕೂಡ ಕಾರ್ತಿಕ ಮಾಸದ ಅಂಗವಾಗಿ ಮೂಡಿಗೆರೆ ಗ್ರಾಮ ದೇವತೆ ಪರಿಮಳಮ್ಮ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸೋಮವಾರ ವಿಜ್ರಂಭಣೆಯಿಂದ ನಡೆಯಿತು.
ಬೆಳಗ್ಗೆ ಪಟ್ಟಣದ ಹಿರೇ ದೇವಿರಮ್ಮನ ಬನದಿಂದ ಪರಿಮಳ್ಳಮ್ಮ ದೇವಿಯ ಉತ್ಸವ ಮೂರ್ತಿಯನ್ನು ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಯಲ್ಲಿ ನೂರಾರು ಸುಮಂಗಲಿಯರಿಂದ ಪೂರ್ಣಕುಂಬ ಕಳಸ ಹೊತ್ತು ಮೆರವಣಿಗೆಯೊಂದಿಗೆ ಪರಿಮಳಮ್ಮ ದೇವಸ್ಥಾನಕ್ಕೆ ತರಲಾಯಿತು. ನಂತರ ದೇವಸ್ಥಾನದಲ್ಲಿ ಗಣ ಹೋಮ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಕಾರ್ತಿಕ ದೀಪೋತ್ಸವದ ಕೊನೆಯ ದಿನವಾದ ಮಂಗಳವಾರ ಶ್ರೀ ಪರಿಮಳಮ್ಮ ದೇವಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ಸಂಜೆ ಕುಂಕುಮಾರ್ಚನೆ, ಲಿಲಿತ ಸಹಸ್ರನಾಮ ಪೂಜೆ ನೆರವೇರಿತು. ದೀಪೋತ್ಸವದಲ್ಲಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸಹಸ್ರರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.