ಮೊದಲ ಬಾರಿಗೆ ಸರಕು ರಫ್ತಿನಲ್ಲಿ ಸಾಧನೆ – ಆತ್ಮನಿರ್ಭರ್ ಭಾರತದ ಪ್ರಮುಖ ಮೈಲಿಗಲ್ಲು ಎಂದು ಮೋದಿ ಟ್ವೀಟ್.

61
firstsuddi

ನವದೆಹಲಿ : ಭಾರತವು ಸರಕು ರಫ್ತಿನಿಂದ 400 ಬಿಲಿಯನ್ ಡಾಲರ್ ಗುರಿಯನ್ನು ಸಾಧಿಸಿದ್ದು, ಇದು ‘ಆತ್ಮನಿರ್ಭರ ಭಾರತ’ ಪ್ರಯಾಣದಲ್ಲಿನ ಪ್ರಮುಖ ಮೈಲಿಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭಾರತವು 400 ಬಿಲಿಯನ್ ಸರಕು ರಫ್ತುಗಳ ಮಹತ್ವಾಕಾಂಕ್ಷೆಯ ಗುರಿಯನ್ನು ಈಗಾಗಲೇ ತಲುಪಿದ್ದು, ಮೊದಲ ಬಾರಿಗೆ ಈ ಗುರಿಯನ್ನು ಸಾಧಿಸಿದೆ.  ಈ ಯಶಸ್ಸಿಗಾಗಿ ನಮ್ಮ ರೈತರು, ನೇಕಾರರು, ಎಂಎಸ್ ಎಂಇಗಳು, ಉತ್ಪಾದಕರು, ರಫ್ತುದಾರರನ್ನು ಅಭಿನಂದಿಸುತ್ತೇನೆ. ಇದು ನಮ್ಮ ಆತ್ಮನಿರ್ಭರ ಭಾರತ್ ಪಯಣದಲ್ಲಿನ ಪ್ರಮುಖ ಮೈಲಿಗಲ್ಲು ಎಂದಿದ್ದಾರೆ.