ಯಾದಗಿರಿಯಲ್ಲಿ ಅಮಾನವೀಯ ಕೃತ್ಯ ; ಹಾಡಹಗಲೇ ಯುವತಿ ಮೇಲೆ ಅತ್ಯಾಚಾರ…

70
firstsuddi

ಯಾದಗಿರಿ : ಜಿಲ್ಲೆಯಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದೆ. ಹಾಡಹಗಲೇ ಯುವತಿ ಮೇಲೆ ಅತ್ಯಾಚಾರ ನಡೆದಿದೆ. ಏಪ್ರಿಲ್ 26ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಹಳ್ಳಿಯೊಂದರ ಯುವತಿ ಮನೆ ಕೆಲಸ ಮಾಡುತ್ತಿದ್ದಳು. ಏಪ್ರಿಲ್ 26 ರಂದು ಯುವತಿ ಕೆಲಸ ಮುಗಿಸಿಕೊಂಡು ಆಟೋದಲ್ಲಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಎಂ.ಹೊಸಳ್ಳಿ ಗ್ರಾಮದ ಆಟೋ ಚಾಲಕ ಹನುಮಂತ ಜಿನಕೇರಿ ಎಂಬಾತ ಹೊಸಳ್ಳಿ ಗ್ರಾಮದ ಸ್ನೇಹಿತ ನರಸಪ್ಪ ಎಂಬಾತನನ್ನು ಆಟೋದಲ್ಲಿ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಯುವತಿ ಮೇಲೆ ಅತ್ಯಾಚಾರಕ್ಕೆ ಪ್ಲಾನ್ ಮಾಡಿದ್ದಾನೆ.

ಯುವತಿ ಯಾದಗಿರಿ ನಗರಕ್ಕೆ ಬರುವಾಗ ಆಟೋ ನಿಲ್ಲಿಸಿ ಎಂದಿದ್ದಾಳೆ. ಆದರೆ ಚಾಲಕ ಆಟೋದಲ್ಲಿ ಡೀಸೆಲ್ ಇಲ್ಲ, ಡೀಸೆಲ್ ಹಾಕಿಸಿಕೊಂಡು ಹೊಸ ಬಸ್ ನಿಲ್ದಾಣದ ಕಡೆ ಬಿಡ್ತೀನಿ ಅಂತ ನಂಬಿಸಿದ್ದಾನೆ. ಬಳಿಕ ನಗರದ ಹೊರಭಾಗದ ವರ್ಕನಳ್ಳಿಯ ನಿರ್ಜನ ಪ್ರದೇಶದ ಹಾಳು ಬಿದ್ದ ಮನೆಯಲ್ಲಿ ಕರೆದುಕೊಂಡು ಹೋಗಿ ಆಟೋ ಚಾಲಕ ಮತ್ತು ಆತನ ಸ್ನೇಹಿತ ಅತ್ಯಾಚಾರ ಮಾಡಿದ್ದಾನೆ.

ಯುವತಿ ‘ಕಾಲಿಗೆ ಬೀಳುತ್ತೇನೆ ನನ್ನನ್ನು ಬಿಟ್ಟು ಬಿಡಿ’ ಎಂದ್ರೂ, ಯುವತಿಯ ಮಾತಿಗೆ ಕಿವಿಗೊಡದೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಯಾರಿಗೂ ಈ ಬಗ್ಗೆ ತಿಳಿಸದಂತೆ ಜೀವ ಬೆದರಿಕೆಯನ್ನು ಹಾಕಿದ್ದಾರೆ. ಅಲ್ಲದೇ ಆಟೋ ಚಾಲಕನ ಸ್ನೇಹಿತ ಅತ್ಯಾಚಾರವೆಸಗುವ ವೀಡಿಯೋವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.

ಇನ್ನು ಈ ಬಗ್ಗೆ ಯುವತಿ ಚಿಕ್ಕಪ್ಪ ಯಾದಗಿರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು, ಅತ್ಯಾಚಾರಸಗಿದ ಆಟೋ ಚಾಲಕ ಹನುಮಂತ ಹಾಗೂ ಆತನ ಸ್ನೇಹಿತ ನರಸಪ್ಪನನ್ನು ಬಂಧಿಸಿ, ಆಟೋ ಜಪ್ತಿ ಮಾಡಿದ್ದಾರೆ.