ಲಾಡ್ಜ್ ನಲ್ಲಿ ಅಂದರ್- ಬಾಹರ್ ಆಟ : 11 ಮಂದಿ ಅರೆಸ್ಟ್!

131
Firstsuddi

ಮಂಗಳೂರು : ನಗರದ ಪಂಪ್ ವೆಲ್ ಇಂಡಿಯಾನಾ ಆಸ್ಪತ್ರೆ ಬಳಿಯ ಎಂಐಓ ರಸ್ತೆಯಲ್ಲಿರುವ ಎ. ಬಿ ಟವರ್ಸ್ ನಲ್ಲಿರುವ ಸ್ವೆವೆನ್ ಸ್ಟೇಸ್ ಎಂಬ ಲಾಡ್ಜ್ ನಲ್ಲಿ ಅಕ್ರಮ ಜೂಜಾಟವಾದ ಅಂದರ್- ಬಾಹರ್ ಆಟವಾಡುತ್ತಿದ್ದ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಅಕ್ರಮ ಜೂಜಾಟವಾಡುತ್ತಿದ್ದ 11 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕುಡುಪು ನಿವಾಸಿ ಅಕ್ಷಯ್ (34), ತಾರೆತೋಟ ನಿವಾಸಿ ಶಶಿಕುಮಾರ್ (44), ತಲಪಾಡಿ ನಿವಾಸಿ ಅಸೀಫ್ (40), ಪೆರ್ಮನ್ನೂರು ನಿವಾಸಿ ಅಶೋಕ್ ಡಿಸೋಜಾ (48), ವೆಲೆನ್ಸಿಯ ನಿವಾಸಿ ಕಾಶಿನಾಥ್ (58), ಕಂಕನಾಡಿ ನಿವಾಸಿ ವಿ ಬಶೀರ್ (52), ಅಶೋಕನಗರ ನಿವಾಸಿ ಗುರುಪ್ರಸಾದ್ (45), ಶಕ್ತಿನಗರ ನಿವಾಸಿ ಸುರೇಶ್ (50), ಜೆಪ್ಪಿನಮೊಗರು ನಿವಾಸಿ ರಾಜಶೇಖರ @ ರಾಜ(47), ಜೆಪ್ಪಿನಮೊಗರು ನಿವಾಸಿ ಅನಿಲ್ ಕುಮಾರ್ (52), ಮಜಿಲ ನಿವಾಸಿ ಸುಧಾಕರ ಸನಿಲ್ (52) ಎಂದು ಗುರುತಿಸಲಾಗಿದ್ದು, ಬಂಧಿತರಿಂದ ರೂ. 38,000/- ನಗದು, ಇಸ್ಪೀಟ್ ಎಲೆಗಳು, 11 ಮೊಬೈಲ್ ಫೋನುಗಳು, ಆಟಕ್ಕೆ ಬಳಸಿದ ಪ್ಲಾಸ್ಟಿಕ್ ಟೇಬಲ್, ಚೆಯರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 1,29,000/- ಆಗಿದೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.