ಶಬರಿಮಲೆ ಹಾಗೂ ತಿರುಮಲ ದೇವಾಲಯಕ್ಕೂ ತಟ್ಟಿದ ಕೊರೊನಾ ಭೀತಿ…

163
firstsuddi

ತಿರುವನಂತಪುರಂ : ವಿಶ್ವದಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಈವರೆಗೂ 61 ಮಂದಿಯಲ್ಲಿ ಸೋಂಕು ತಗುಲಿರುವುದಾಗಿ ದೃಢಪಟ್ಟಿದೆ. ಹೆಚ್ಚಾಗಿ ಕೇರಳದಲ್ಲಿ ಈವರೆಗೂ 12 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಹಿನ್ನೆಲೆ, ಕೇರಳದಲ್ಲಿ ಮಾರ್ಚ್ 31ರವರೆಗೆ ಚಿತ್ರಮಂದಿರಗಳು, ಶಾಲಾ-ಕಾಲೇಜುಗಳನ್ನು ತೆರೆಯದಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೇ ಧಾರ್ಮಿಕ ಕ್ಷೇತ್ರ ಶಬರಿಮಲೆಗೂ ಈ ಸಮಯದಲ್ಲಿ ಭೇಟಿ ನೀಡುವವರಿಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಕೂಡಾ ದೇವಸ್ಥಾನ ಭೇಟಿ ನೀಡುವ ಭಕ್ತರಿಗೂ ನಿರ್ಬಂಧ ಹೇರಿದೆ.