ಶಾಲೆಗಳ ಆರಂಭ ವಿಚಾರ ಸೋಮವಾರದಂದು ನಿರ್ಧಾರ : ಸುರೇಶ್ ಕುಮಾರ್.

90
firstsuddi

ಬೆಂಗಳೂರು : ಸೋಮವಾರದಂದು ಶಾಲೆಗಳ ಆರಂಭದ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಈ ಕುರಿತು ಇಂದು ಸಚಿವ ಸುರೇಶ್ ಕುಮಾರ್, ಆಯುಕ್ತ ಅನ್ಬುಕುಮಾರ್ ಸೇರಿದಂತೆ ಹಲವು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಸಭೆ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು, ವರ್ಷದ ಕಲಿಕೆಯ ಆರಂಭಕ್ಕೆ ಸಲಹೆ ಬಂದಿದ್ದು, ಶಾಲೆ ಆರಂಭ ಕುರಿತು ಸೋಮವಾರ ಮತ್ತೊಂದು ಸಭೆ ನಡೆಸಲಿದ್ದು, ಶಾಲೆ ಆರಂಭದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ವಿದ್ಯಾಗಮ ಮತ್ತೆ ಆರಂಭ ಮಾಡಲು ಚಿಂತನೆ ನಡೆದಿದ್ದು, ಎಲ್ಲೆಲ್ಲಿ ಯಾವ ರೀತಿಯಲ್ಲಿ ಮಾಡಬೇಕೆಂದರ ಕುರಿತು ಚರ್ಚೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆಯ ಜೊತೆ ಚರ್ಚೆ ಮಾಡಿಯೇ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಖಾಸಗಿ ಶಾಲಾ ಶುಲ್ಕ ಕುರಿತಂತೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್ ಅವರು, ಈ ಸಂಬಂಧ ಸದ್ಯ ಕೋರ್ಟ್ ನಲ್ಲಿದ್ದು, ನ್ಯಾಯಾಲಯದ ತೀರ್ಪಿನ ನಂತರ ಚರ್ಚಿಸಿ ಅಂತಿಮ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.