ಶಾಲೆಯ ಕ್ಯಾಬಿನ್ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕ್ರೈಸ್ತ ಧರ್ಮಗುರು…

297
firstsuddi

ಉಡುಪಿ: ಶಿರ್ವದ ಪ್ರತಿಷ್ಠಿತ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾದ ವಂ|ಮಹೇಶ್ ಡಿಸೋಜಾ (36) ಅವರು ಶುಕ್ರವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ವರದಿಯಾಗಿದೆ. ಶುಕ್ರವಾರ ರಾತ್ರಿ ಶಾಲೆಯ ಕ್ಯಾಬಿನ್ ಒಳಗಿನ ಫ್ಯಾನಿಗೆ ನೇಣು ಬಿಗಿದ ಕ್ರೈಸ್ತ ಧರ್ಮಗುರು ವಂ| ಮಹೇಶ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಧರ್ಮಗುರುಗಳು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯವಾಗಿ ಉದಯವಾದ ಬಳಿಕ ಪ್ರಥಮ ಧರ್ಮಗುರುವಾಗಿ 2013ರಲ್ಲಿ ಗುರು ದೀಕ್ಷೆ ಪಡೆದಿದ್ದರು. ಮೂಲತಃ ಮೂಡುಬೆಳ್ಳೆಯವರಾಗಿದ್ದ ಅವರು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿದ್ದರು. ಘಟನಾ ಸ್ಥಳಕ್ಕೆ ಮಧ್ಯರಾತ್ರಿಯೇ ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಶಿರ್ವ ಪೊಲೀಸರು ಭೇಟಿ ನೀಡಿದ್ದಾರೆ.