ಸರ್ಕಾರಿ ಆಸ್ಪತ್ರೆಯಲ್ಲೇ ಮಹಿಳಾ ಸಿಬ್ಬಂದಿಯೊಂದಿಗೆ ವೈದ್ಯಾಧಿಕಾರಿಯ ಸರಸ ಸಲ್ಲಾಪ – ವಿಡಿಯೋ, ಫೋಟೋ ವೈರಲ್…

86
firstsuddi

ಮಂಗಳೂರು : ಆರೋಗ್ಯ ಇಲಾಖೆಯ ವೈದ್ಯನೊಬ್ಬನ ರಾಸಲೀಲೆ ಬಯಲಾಗಿದೆ. ದ.ಕ ಜಿಲ್ಲೆಯ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ, ಆಯುಷ್ಮಾನ್ ನೋಡಲ್ ಅಧಿಕಾರಿ ಮಹಿಳಾ ಸಿಬ್ಬಂದಿಗಳೊಂದಿಗೆ ಚೆಲ್ಲಾಟವಾಡುತ್ತಿರುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಸ್ಪತ್ರೆಯ 9 ಮಂದಿ ಮಹಿಳಾ ಸಿಬ್ಬಂದಿ ಜೊತೆಗೆ ರತ್ನಾಕರ್ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನ ತೊಡೆಯ ಮೇಲೆ ಓರ್ವ ಮಹಿಳೆಯನ್ನು ಕೂರಿಸಿದ್ದಾನೆ. ಇಬ್ಬಿಬ್ಬರು ಮಹಿಳಾ ಸಿಬ್ಬಂದಿಯನ್ನು ಕೂರಿಸಿಕೊಂಡು ರತ್ನಾಕರ್ ಹಾಡಹಗಲೇ ಆಸ್ಪತ್ರೆಯಲ್ಲಿ ರಂಗಿನಾಟ ಆಡಿದ್ದಾನೆ.

ಒಂದು ವೇಳೆ ರತ್ನಾಕರ್ ಜೊತೆಗೆ ಸಹಕರಿಸದ ಸಿಬ್ಬಂದಿಯನ್ನು ಕೆಲಸದಿಂದ ತೆಗೆಸುವ ಅಥವಾ ಟ್ರಾನ್ಸ್‍ಫರ್ ಮಾಡಿಸುವ ಹೀಗೆ ಹಲವಾರು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಕೇಳಿ ಬಂದಿದೆ. ಈ ಭಯಕ್ಕೆ ಮಹಿಳಾ ಸಿಬ್ಬಂದಿ ಆತ ಹೇಳಿದಂತೆ ಕೇಳುತ್ತಿದ್ದರು. ಜತೆಗೆ ರತ್ನಾಕರ್ ಮಹಿಳಾ ಸಿಬ್ಬಂದಿಯನ್ನು ಕರೆದುಕೊಂಡು ಟ್ರಿಪ್ ಕೂಡ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.