ಸ್ಯಾಂಡಲ್​ವುಡ್ ಯುವ ನಟನ ಬರ್ಬರ ಹತ್ಯೆ – ಬಾಮೈದನೇ ಕೃತ್ಯ ಎಸಗಿರೋ ಶಂಕೆ…

75
firstsuddi

ಬೆಂಗಳೂರು : ಸ್ಯಾಂಡಲ್ ವುಡ್ ಯುವ ನಟ ಸತೀಶ್ ವಜ್ರ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಆರ್.ಆರ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

`ಲಗೋರಿ’ ಎಂಬ ಚಿತ್ರದಲ್ಲಿ ನಟನಾಗಿ ಬಣ್ಣಹಚ್ಚಿದ ಸತೀಶ್ ವಜ್ರ ಅವರನ್ನು ಅವರ ಮನೆಯಲ್ಲಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

3 ತಿಂಗಳ ಹಿಂದಷ್ಟೆ ಸತೀಶ್ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ತನ್ನ ಅಕ್ಕನ ಸಾವಿಗೆ ಸತೀಶ್ ಕಾರಣ ಎಂದು ಶಂಕಿಸಿ ಬಾಮೈದನೇ ಕೊಲೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗಿದೆ. ಆರ್.ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.