ಮಂಗಳೂರು : ಅಪಾರ್ಟ್‍ಮೆಂಟ್ ಕಾಂಪೌಂಡ್ ಮೇಲೆ ಉಗ್ರ ಸಂಘಟನೆ ಪರ ಬರಹ…

119
firstsuddi

ಮಂಗಳೂರು : ನಗರದ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್‍ಮೆಂಟ್ ಕಾಂಪೌಂಡ್ ಮೇಲೆ ಉಗ್ರ ಸಂಘಟನೆಯ ಪರ ಬರಹಗಳನ್ನು ಬರೆದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಾಲಿಬಾನ್ ಉಗ್ರ ಸಂಘಟನೆಯಾದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಜಿಂದಾಬಾದ್ ಎಂದು ಬರೆಯಲಾಗಿದೆ. “ ಡು ನಾಟ್ ಫೋರ್ಸ್ ಅಸ್ ಟು ಇನ್ವೈಟ್ ಆಂಡ್ ಲಷ್ಕರ್-ಎ-ತೊಯ್ಬಾ ಟು ಡೀಲ್ ವಿತ್ ಸಂಘೀಸ್ ಆಂಡ್ ಮನ್ವೇದಿಸ್, ಲಷ್ಕರ್ ಜಿಂದಾಬಾದ್ ಎಂದು ದುಷ್ಕರ್ಮಿಗಳು ಕಾಂಪೌಂಡ್ ಮೇಲೆ ಬರೆದಿದ್ದು, ಸಂಘೀಸ್ ಆಂಡ್ ಮನ್ವೇದಿಸ್ ಎಂಬ ಪದದ ಅನುವಾದ ಸಂಘಿಗಳು ಹಾಗೂ ಮನುವಾದಿಗಳ ವಿರುದ್ಧ ಹೋರಾಟಕ್ಕೆ ಲಷ್ಕರ್-ಇ-ತೊಯ್ಬಾ ತಾಲಿಬಾನ್ ಸಂಘಟನೆಗೆ ಆಹ್ವಾನಿಸಲು ನಮ್ಮನ್ನು ಪ್ರೇರೇಪಿಸಬೇಡಿ ಎಂಬುದಾಗಿದೆ. ಸ್ಥಳಕ್ಕೆ ಕದ್ರಿ ಠಾಣಾ ಪೊಲೀಸರು ಭೇಟಿ ನೀಡಿ ಬರಹದ ಮೇಲೆ ಬಣ್ಣ ಹೊಡೆಸಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.