ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನ 12 ಮಂದಿಗೆ ಓಮಿಕ್ರಾನ್ ವಕ್ಕರಿಸಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಓಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ 31 ಕ್ಕೇರಿದೆ.
ಬೆಂಗಳೂರು ಒಂದರಲ್ಲೇ 10 ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ. ಇಂಗ್ಲೆಂಡ್ನಿಂದ ಬೆಂಗಳೂರಿಗೆ ಬಂದಿದ್ದ 31 ವರ್ಷದ ವ್ಯಕ್ತಿ, 42 ವರ್ಷದ ವ್ಯಕ್ತಿ, 18 ವರ್ಷದ ಯುವತಿ, 21 ವರ್ಷದ ಯುವಕ ಹಾಗೂ 11 ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 20 ವರ್ಷದ ಯುವತಿ, 56 ವರ್ಷದ ವ್ಯಕ್ತಿ, 54 ವರ್ಷದ ಮಹಿಳೆಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಇನ್ನು ನಯಾಗರದಿಂದ ಬಂದಿದ್ದ 59 ವರ್ಷದ ಮಹಿಳೆ ಹಾಗೂ ಡೆನ್ಮಾರ್ಕ್ ನಿಂದ ಬಂದಿದ್ದ 49 ವರ್ಷದ ಮಹಿಳೆಗೆ ಓಮಿಕ್ರಾನ್ ಸೋಂಕು ತಗುಲಿದೆ. ಇನ್ನೂ ಘಾನಾದಿಂದ ಮಂಗಳೂರಿಗೆ ಬಂದಿದ್ದ 27 ವರ್ಷದ ಯುವಕ, ಮೈಸೂರಿನ 9 ವರ್ಷದ ಬಾಲಕಿಗೆ ಒಮಿಕ್ರಾನ್ ದೃಢಪಟ್ಟಿದೆ.
ಒಟ್ಟಾರೆ ಬೆಂಗಳೂರಿನಲ್ಲಿ 18, ದಕ್ಷಿಣ ಕನ್ನಡದಲ್ಲಿ 7, ಉಡುಪಿ 2, ಧಾರವಾಡ, ಬೆಳಗಾವಿ, ಶಿವಮೊಗ್ಗ, ಮೈಸೂರಿನಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ.










