ಹನಿಟ್ರ್ಯಾಪ್ ಮೂಲಕ ಹಣಕ್ಕೆ ಬೇಡಿಕೆ – ಸ್ಯಾಂಡಲ್‍ವುಡ್‍ನ ಉದಯೋನ್ಮುಖ ನಟ ಅರೆಸ್ಟ್…

63
firstsuddi

ಬೆಂಗಳೂರು : ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಸ್ಯಾಂಡಲ್‍ವುಡ್‍ನ ಉದಯೋನ್ಮುಖ ನಟನನ್ನು ಅರೆಸ್ಟ್ ಮಾಡಲಾಗಿದೆ. ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಬಂಧಿತ ಆರೋಪಿ. ಈತ ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ನಾಯಕನಾಗಿದ್ದ.

ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಂದಿಗೆ ಯುವ ಇಬ್ಬರು ಯುವತಿಯರ ಹೆಸರು ಬಳಸಿಕೊಂಡು ಚಾಟ್ ಮಾಡಿದ್ದ. ಉದ್ಯಮಿ ಕೂಡ ಯುವತಿರೆಂದು ಸಲುಗೆಯಿಂದ ಚಾಟ್ ಮಾಡಿದ್ದರು. ಆ ಬಳಿಕ ಅಶ್ಲೀಲ ಚಾಟ್ ಆರೋಪದಡಿ ಯುವ ನಾವು ಕ್ರೈಮ್ ಪೊಲೀಸರೆಂದು ಭೇಟಿಯಾಗಿ ಬೆದರಿಕೆ ಹಾಕಿದ್ದಾನೆ. ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ. ಈ ಕೇಸ್ ಮುಂದುವರಿಸದಿರಲು ಹಣ ಕೊಡಲೇಬೇಕೆಂದು ಕೇಳಿದ್ದಾನೆ.

ಮೊದಲಿಗೆ ಐವತ್ತು ಸಾವಿರ ರೂ. ನಂತರ ಬ್ಯಾಂಕ್‍ನಿಂದ ಮೂರು ಲಕ್ಷ ರೂ. ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣವನ್ನು ಯುವ ಪಡೆದಿದ್ದ. ಯುವ ಒಂದು ಬಾರಿ ಹಲಸೂರು ಗೇಟ್ ಬಳಿ ಬಂದು ಹಣ ಪಡೆದಿದ್ದ. ಆ ಬಳಿಕ ಉದ್ಯಮಿಗೆ ಅನುಮಾನ ಬಂದು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಕೇಸ್ ದಾಖಲಿಸಿಕೊಂಡು ದೂರಿನ ಅನ್ವಯ ಆರೋಪಿ ಯುವನನ್ನು ಇದೀಗ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.