ಹಿಜಾಬ್ ಮುಖ್ಯ – ಇಂದು ಕೂಡ ಪರೀಕ್ಷೆ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು…

75
firstsuddi

ಶಿವಮೊಗ್ಗ : ನಗರದಲ್ಲಿ ಇಂದು ಸಹ ಹಿಜಬ್ ವಿವಾದ ಮುಂದುವರೆದಿದ್ದು, ಇಬ್ಬರು ವಿದ್ಯಾರ್ಥಿನಿಯರು ತರಗತಿಯನ್ನು ಬಹಿಷ್ಕರಿಸಿದ್ದಾರೆ.

ಶಿವಮೊಗ್ಗದ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಸಹ 10 ನೇ ತರಗತಿಗೆ ತಾಲೂಕು ಮಟ್ಟದ ಪೂರ್ವಭಾವಿ ಸಿದ್ಧತಾ ಪರೀಕ್ಷೆ ಇತ್ತು. ಹಿಜಬ್, ಬುರ್ಖಾ ಧರಿಸಿ 9 ಹಾಗೂ 10ನೇ ತರಗತಿ ವಿದ್ಯಾರ್ಥಿನಿ ಬಂದಿದ್ದರು. ಆದರೆ ಹಿಜಬ್, ಬುರ್ಖಾ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಲು ಶಿಕ್ಷಕರು ನಿರಾಕರಿಸಿದ್ದರು. ಇದರಿಂದಾಗಿ ವಿದ್ಯಾರ್ಥಿನಿಯರು ಶಾಲೆಯಿಂದ ಹೊರಗೆ ಹೋಗಿದ್ದಾರೆ.

ನಿನ್ನೆಯೂ ಸಹ 10ನೇ ತರಗತಿಗೆ ತಾಲೂಕು ಮಟ್ಟದ ಪೂರ್ವಭಾವಿ ಸಿದ್ಧತಾ ಪರೀಕ್ಷೆ ಸಹ ಇತ್ತು. ತರಗತಿಗೆ ಹಾಜರಾಗಿದ್ದ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಹಿಜಬ್, ಬುರ್ಖಾ ತೆಗೆಯುವಂತೆ ಸೂಚಿಸಿದ್ದರು. ಆದರೆ ವಿದ್ಯಾರ್ಥಿನಿಯರು ನಾವು ಹಿಜಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ. ಇಲ್ಲದಿದ್ದರೆ ಪರೀಕ್ಷೆ ಬರೆಯುವುದಿಲ್ಲ ಎಂದು ತಗಾದೆ ತೆಗೆದಿದ್ದಾರೆ.

ಇದಕ್ಕೆ ಒಪ್ಪದ ಶಿಕ್ಷಕರು ಎಲ್ಲರೂ ಕರ್ನಾಟಕ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಹಿಜಬ್ ತೆಗೆದರೆ ತರಗತಿಯಲ್ಲಿ ಇರಿ, ಇಲ್ಲದಿದ್ದರೆ ಹೊರಗೆ ಹೋಗಿ ಎಂದಿದ್ದಾರೆ. ವಿದ್ಯಾರ್ಥಿನಿಯರು ನಾವು ಬೇಕಾದರೆ ಪರೀಕ್ಷೆ ಬಹಿಷ್ಕರಿಸುತ್ತೇವೆ. ಹಿಜಬ್ ತೆಗೆಯುವುದಿಲ್ಲ ಎಂದು ಶಾಲೆಯಿಂದ ಮನೆಗೆ ವಾಪಾಸ್ ಆಗಿದ್ದರು.