ಹೊತ್ತಿ ಉರಿದ ಕೊಟ್ಟಿಗೆ : ಹಸು ಸಜೀವ ದಹನ…

136
Firstsuddi

ಕಲಬುರಗಿ : ಆಕಸ್ಮಕ ಅಗ್ನಿ ಅವಘಡದಿಂದ ಹಸುವೊಂದು ಸಜೀವ ದಹನಗೊಂಡಿರುವ ಘಟನೆ ಶಹಬಾದ್ ತಾಲ್ಲೂಕಿನ ಮರತೂರ ಗ್ರಾಮದಲ್ಲಿ ನಡೆದಿದೆ.

ದೇವಾನಂದ ಮರತೂರ ಅವರಿಗೆ ಸೇರಿದ ಹಸು ಸಜೀವ ದಹನವಾಗಿದೆ. ಇನ್ನೊಂದು ಹಸುವಿನ ದೇಹ ಕೂಡಾ ಬಹುತೇಕ ಸುಟ್ಟು ಹೋಗಿದೆ. ಎಂದಿನಂತೆ ಕೊಟ್ಟಿಗೆಯಲ್ಲಿ ಜಾನುವಾರುಗಳನ್ನು ಬಿಟ್ಟಿದ್ದಾಗ, ಬೆಂಕಿ ಅವಘಡ ಸಂಭವಿಸಿದೆ. ಪರಿಣಾಮ ಆಕಳಿಗೆ ಬೆಂಕಿ ಆವರಿಸಿದ್ದು, ಜೀವ ರಕ್ಷಣೆಗಾಗಿ ಬೆಂಕಿಯಿಂದ ಹಸು ಹೊರ ಬಂದಿದೆ. ಆದರೆ ತೀವ್ರ ಸುಟ್ಟ ಗಾಯಗಳಿಂದ ನರಳಿ ಸಾವನ್ನಪ್ಪಿದೆ. ಘಟನೆ ಸಂಬಂಧ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.