ದೈವ ನರ್ತಕರಿಗೆ ಗುಡ್ ನ್ಯೂಸ್ – 2 ಸಾವಿರ ರೂ. ಮಾಸಾಶನ ಘೋಷಿಸಿದ ಸರ್ಕಾರ.

52
firstsuddi

ಬೆಂಗಳೂರು : ಭೂತಾರಾಧನೆ ಮಾಡುವ ದೈವ ನರ್ತಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೈವ ನರ್ತಕರಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೀಡಲು ತೀರ್ಮಾನಿಸಲಾಗಿದೆ.

ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ದೈವ ನರ್ತನ ಹಿಂದೂ ಸಂಸ್ಕ್ರತಿ ಭಾಗ. ಇದು ನಮ್ಮ ಸಂಸ್ಕ್ರತಿ ಭಾಗ ಇದನ್ನು ಮತ್ತಷ್ಟು ಗಟ್ಟಿ ಮಾಡುತ್ತೇವೆ. ಈ ಹಿನ್ನೆಲೆಯಲ್ಲಿ ದೈವ ನರ್ತನ ಮಾಡುವವರಿಗೆ ಮಾಸಾಶನ ಕೊಡುವ ತೀರ್ಮಾನ ಮಾಡಿದ್ದೀವಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತೀ ತಿಂಗಳು 2 ಸಾವಿರ ಮಾಸಾಶನ ಕೊಡಲು ನಿರ್ಧಾರ ಮಾಡಲಾಗಿದೆ. 60 ವರ್ಷ ತುಂಬಿದ ದೈವನರ್ತನ ಮಾಡುವವರಿಗೆ ಮಾಸಾಶನ ಸಿಗಲಿದೆ ಎಂದರು.

ಭೂತಾರಾಧನೆ ಕುರಿತ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತಾಡಬಾರದು. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ. ಯಾರೋ ಒಬ್ಬ ವ್ಯಕ್ತಿ ಹಾಗೆ ಹೇಳಿದ್ರೆ ಆ ಸಂಸ್ಕೃತಿಯಿಂದ ಯಾರೂ ದೂರ ಆಗಲ್ಲ ಎಂದರು.

ರಾಮಮಂದಿರ ಸ್ಫೋಟಕ್ಕೆ ಪಿಎಫ್ ಐ ಸಂಚು ಆರೋಪ ವಿಚಾರದ ಕುರಿತು ಮಾತನಾಡಿದ ಅವರು, ಪಿಎಫ್ ಐ ಹದ್ದುಬಸ್ತಿನಲ್ಲಿಡುವ ಕೆಲಸ ಸರ್ಕಾರ ಮಾಡುತ್ತಿದೆ. ಪಿಎಫ್ ಐ ಸಂಘಟನೆ ನಿಷೇಧಿಸಿದ ನಂತರ ಹಲವು ಸಂಗತಿಗಳು ಬೆಳಕಿಗೆ ಬರುತ್ತಿವೆ. ಅದು ಭಾರತವನ್ನು ಇಸ್ಲಾಮೀಕರಣ ಮಾಡುವಂತಹ ದೊಡ್ಡ ಸಂಚು ಮಾಡಿತ್ತು. ರಾಮಮಂದಿರ ಧ್ವಂಸ ಮಾಡುತ್ತೇವೆ ಎಂದು ಅಜೆಂಡಾದಲ್ಲಿರುವ ಕಾರ್ಯತಂತ್ರವನ್ನು ನಮ್ಮ ಎನ್ ಐಎ ತಂಡ ವಿಫಲಗೊಳಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಂದು ಹಂತದಲ್ಲಿ ತುಷ್ಟೀಕರಣದ ರಾಜಕಾರಣಕ್ಕೆ ಪಿಎಫ್ಐ ಅನ್ನು ದೇಶದಲ್ಲಿ ಬೆಂಬಲಿಸಲಾಗ್ತಿದೆ. ಯಾವುದೇ ಕಾರಣಕ್ಕೂ ಭಾರತವನ್ನು ಇಸ್ಲಾಮೀಕರಣ ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಪಿಎಫ್ ಐ ಕಾರ್ಯಕರ್ತರ ಹತೋಟಿಗೆ ತರುವ ಕೆಲಸವನ್ನು ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಮಾಡಲಿದೆ ಎಂದರು.