ನೀರು ಕೊಡಿ ಎಂದು ಕೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂಧಿಸಿದ ಕಾರ್ಪೋರೇಟರ್ ಪತಿ…

175
firstsuddi

ಬೆಂಗಳೂರು : ನೀರು ಕೊಡಿ ಎಂದು ಥಣಿಸಂದ್ರ ವಾರ್ಡ್‍ನ ನಿವಾಸಿಗಳು ಕೇಳಿದ್ದಕ್ಕೆ ಕಾರ್ಪೋರೇಟರ್ ಮಮತಾ ಎಂಬುವವರ ಪತಿ ವೆಂಕಟೇಶ್ ಅವರು ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ ಎಂದು ತಿಳಿದು ಬಂದಿದ್ದು, ವೆಂಕಟೇಶ್ ಅವರು ನಿಂಧಿಸಿರುವ ಆಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, 8ತಿಂಗಳಿಂದ ನಮಗೆ ನೀರಿಲ್ಲ ಯಾರಿಗೂ ಮನಸಾಕ್ಷಿ ಇಲ್ಲ ಸರ್ ಎಂದು ವೆಂಕಟೇಶ್ ಅವರ ಬಳಿ ಹೇಳಿಕೊಂಡಿದ್ದಾರೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿರುವುದಕ್ಕೆ ಕೋಪಗೊಂಡ ವೆಂಕಟೇಶ್ ಅವರು ಶಾಸಕರಲ್ಲ ಅವರ ಅಪ್ಪ ಅಥವಾ ಸಿಎಂ ಬಳಿ ಹೋಗಿ ದೂರನ್ನು ನೀಡಿ ಎಂದು ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.