ಮೂಡಿಗೆರೆ: ಸ್ವಯಂ ಸೇವಕರು ಹೆಚ್ಚಿನ ಸಹಾಯ ಮಾಡಿದ್ದಲ್ಲಿ ನಿರಾಶ್ರಿತರು ಪುನರ್ವಸತಿ ಕಲ್ಪಿಸಲು ಸಾದ್ಯ : ಎಂ. ಎಲ್.ಸಿ. ಪ್ರಾಣೇಶ್.

603
firstsuddi

ಮೂಡಿಗೆರೆ: ಸ್ವಯಂ ಸೇವಕರು ನಿರಂತರವಾಗಿ ನೆರಸಂತ್ರಸ್ಥರಿಗೆ ಸ್ವಯಂಪ್ರೇರಿತವಾಗಿ ಸಹಾಯವನ್ನು ಮಾಡುತ್ತಿದ್ದು, ಅದರಂತೆ ಅವರ ದಿನನಿತ್ಯದ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದಕ್ಕೆ ಇಂದು ನೆರೆ ಸಂತ್ರಸ್ಥರ ಕಷ್ಟವೇನೆಂದು ಸರಕಾರಕ್ಕೆ ತಿಳಿಯುವ ಮಟ್ಟದಲ್ಲಿ ಸಹಕಾರಿಯಾಗಿದೆ. ಅದೂ ಅಲ್ಲದೇ ಪತ್ರಕರ್ತರ ಸಮಯ ಪ್ರಜ್ಞೆಯೂ ಇದರಲ್ಲಿ ಬಹಳ ಸಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಪ್ರಾಣೇಶ್ ಇಂದು ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇಲ್ಲಿ ಕೆಲ ದಿನಗಳ ಹಿಂದೆ ಮಲೆನಾಡಿನಲ್ಲಿ ಎಂದೂ ಕೇಳರಿಯದ ರೀತಿಯಲ್ಲಿ ಮಳೆ ಸುರಿದ ಪರಿಣಾಮ ತಾಲ್ಲೂಕಿನಾದ್ಯಂತ ಬಹಳ ಗ್ರಾಮಗಳು ಜಲಾವೃತವಾದ ಹಿನ್ನಲೆಯಲ್ಲಿ ಅಲ್ಲಿನ ಗುಡ್ಡಗಳು ಕುಸಿದು ಜನರ ಆಸರೆ ಹಾಗು ಸಾವು ನೋವುಗಳು ಸಂಭವಿಸಿದ್ದು, ಹಾಗೆಯೇ ಹಲವರು ನಿರ್ಗತಿಕರಾಗಿದ್ದು, ಇದೀಗ ಅವರ ಕಷ್ಟಕ್ಕೆ ನಾವು ಸದಾ ಅವರೊಂದಿಗೆ ಇರುತ್ತೇವೆ. ನಿನ್ನೆಯ ಸಂಭವ ಮರೆತು ಬಿಡಿ ಇನ್ನು ಮುಂದೆ ಸದಾ ನಿಮ್ಮೊಂದಿಗೆ ನಾವು ಇರುತ್ತೇವೆ. ಕೆಲವು ಧಾನಿಗಳು ಸ್ವಯಂಪ್ರೇರಿತವಾಗಿ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದು, ಅದರಲ್ಲಿ ರಾಜ್ಯಾದ್ಯಂತ ಜನರು ಇಲ್ಲಿನ ನೆರೆಸಂತ್ರಸ್ಥರ ಕುಟುಂಬಕ್ಕೆ ವಿವಿಧ ಸಂಘ-ಸಂಸ್ಥೆಗಳು ಮಾಧ್ಯಮ ತಂಡದವರು ಅಲ್ಲಿಗೆ ತೆರಳಿ ದಿನನಿತ್ಯ ಬಳಸುವ ಎಲ್ಲಾ ಸಾಮಗ್ರಿಗಳನ್ನು ಅವರವರ ಮನೆಬಾಗಿಲಿಗೆ ತಲುಪಿಸುತ್ತಿದ್ದು, ಅದರ ಜೊತೆಗೆ ಅವರಿಗೆ ಕೇವಲ ದಿನನಿತ್ಯದ ಸಾಮಗ್ರಿಗಳಲ್ಲದೇ ಅವರು ಪುನರ್ವಸತಿ ಕಲ್ಪಿಸುವ ರೀತಿ ಸಹಕಾರ ಮಾಡಿದರೆ ಇನ್ನೂ ಅವರಿಗೆ ಇದರಿಂದ ಸಹಕಾರಿಯಾಗುತ್ತದೆ. ಆದರೆ ಇಲ್ಲಿಯವರೆಗೆ ಹಾಗು ಇನ್ನು ಮುಂದೆಯು ಸಹ ಇಂತಹ ಕಾರ್ಯಕ್ಕೆ ಇಲ್ಲಿನ ಜನರಿಗೆ ಸ್ವಾಗತಾರ್ಹ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ, ಕೊಪ್ಪ, ಎನ್.ಆರ್ ಪುರ, ಶೃಂಗೇರಿ,ತಾಲ್ಲೂಕುಗಳನ್ನು ಅತಿವೃಷ್ಟಿ ತಾಲ್ಲೂಕು ಎಂದು ಸರ್ಕಾರ ಘೋಷಿಸಿದೆ ಅದರಂತೆ ಚಿಕ್ಕಮಗಳೂರು ತಾಲ್ಲೂಕನ್ನು ಸಹ ಅತಿವೃಷ್ಟಿ ತಾಲ್ಲೂಕು ಎಂದು ಸರ್ಕಾರ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ ವರದಿಯಂತೆ ತಾಲ್ಲೂಕಿನಾದ್ಯಂತ 140 ಕೋಟಿ ಆಸ್ತಿ ನಾಶದ ಕುರಿತು ವರದಿ ಸಲ್ಲಿಕೆಯಾಗಿದೆ. ಆದರೆ ಅದಕ್ಕಿಂತ ಹೆಚ್ಚಿನ ನಷ್ಠಹೊಂದಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಮತ್ತೊಮ್ಮೆ ಸರ್ವೆ ನಡೆಸಲು ಮನವಿಯನ್ನು ಮಾಡಲಾಗಿದೆ ಎಂದರು.
ಮಲೆನಾಡಿನಲ್ಲಿ ಅತಿವೃಷ್ಠಿಯಿಂದ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದು, ಅದಕ್ಕೆ ವೈಜ್ಞಾನಿಕ ಕಾರಣವನ್ನು ಕಂಡುಕೊಳ್ಳಬೇಕಾಗಿದೆ. ಅದನ್ನು ಕಂಡುಹಿಡಿಯಲು ಅಧಿಕಾರಿಗಳು ತಂಡವನ್ನು ರಚಿಸಿಕೊಳ್ಳಬೇಕೆಂದು ಕೋರಿದ್ದು, ಹಾಗೇಯೇ ಇಲ್ಲಿನ ರೈತರ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿಯನ್ನು ಸರ್ಕಾರಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಕೋರಲಾಗಿದ್ದು, ಜಿಲ್ಲೆಯಲ್ಲಿ 26 ಕಾಳಜಿ ಕೇಂದ್ರಗಳನ್ನು ನೆರಹಾವಳಿಯಿಂದ ತೊಂದೆರೆಗೊಳಗಾದ ಪ್ರದೇಶವನ್ನು ಗುರುತುಮಾಡಿ ಅಲ್ಲಿನ ಜನರನ್ನು ಶಾಶ್ವತವಾಗಿ ಸ್ಥಳಾಂತರಿಸಿ ಇಂತವರಿಗೆ ಸೂಕ್ತ ರೀತಿಯಲ್ಲಿ ಪರಿಹಾರದ ಜೊತೆಗೆ ಸೂಕ್ತ ಖಾಯಂ ವಸತಿ ವ್ಯವಸ್ಥೆ ಕಲ್ಪಿಸಲು ಸ್ಥಳ ಗುರುತು ಮಾಡಿ ಸೌಲಭ್ಯವನ್ನು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಇತ್ತೀಚಿಗೆ ನೆರೆಸಂತ್ರಸ್ಥರಿಗೆ ಪರಿಹಾರವನ್ನು ಒದಗಿಸಲು ಇದರ ಸಂಪತ್ತು ಕ್ರೂಡಿಕರಣಕ್ಕೆ ಈಗಾಗಲೇ ಜಾರಿಯಲ್ಲಿರುವ ಅನ್ನಭಾಗ್ಯದ ಅಕ್ಕಿಯಲ್ಲಿ ಕಡಿತಗೊಳಿಸಲು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಿರುವ ಬಗ್ಗೆ ಮಾಹಿತಿ ಇದ್ದು, ಅಂತಹ ಯೋಜನೆಯನ್ನು ಕಡಿತಗೊಳಿಸಿದ್ದಲ್ಲಿ ಇಲ್ಲಿನ ಜನರಿಗೆ ಗಾಯದ ಮೇಲೆ ಬರೆ ಎಳೆಂದಾತಾಗುತ್ತದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಾಹಿತಿಯನ್ನು ನೀಡಿದ ವಿ.ಪ.ಸದಸ್ಯರು ಇಲ್ಲ ಅಂತಹ ಯಾವುದೇ ಯೋಚನೆ ಸರ್ಕಾರಕ್ಕೆ ಇಲ್ಲ ಇದರ ಕುರಿತು ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಲಾಗುವುದು. ಹಾಗೆಯೇ ಇಲ್ಲಿನ ಕೆಲವು ಮಹಿಳೆಯರು ಅದರಲ್ಲಿಯೂ ವಿಶೇಷವಾಗಿ ಇಲ್ಲಿನ ಗ್ರಾಮೀಣ ಭಾಗದ ಮಹಿಳೆಯರು ತೋಟದ ಕೂಲಿ ಕೆಲಸ ಅಥವಾ ಜೀವನಕ್ಕಾಗಿ ಒಂದೋ ಎರಡೋ ಎಕರೆ ಜಮೀನು ಹೊಂದಿ ಖಾಸಗಿ ಸಾಲವನ್ನು ಸ್ವಸಹಾಯ ಅಥವಾ ಖಾಸಗಿ ಪೈನಾನ್ಸಿನಲ್ಲಿ ಪಡೆದಿದ್ದು, ನೆರೆಯ ಪರಿಸ್ಥಿತಿಯಲ್ಲಿ ಕೆಲಸವಿಲ್ಲದೇ ಅಲೆದಾಡುತ್ತಿದ್ದಾರೆ. ಅವರಿಂದ ಸಾಲ ಮರುಪಾವತಿಗಾಗಿ ಒತ್ತಾಯ ಪಡಿಸಿದರೆ ಅಂತವರ ವಿರುದ್ದ ಕ್ರಿಮಿನಲ್ ಮೊಕದಮ್ಮೆಯನ್ನು ದಾಖಲಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಅದಕ್ಕೆ ಅವರು ಈ ಕುರಿತು ಪರಿಶೀಲಿಸಿ ಕ್ರಮವಹಿಸುವ ಬಗ್ಗೆ ಭರವಸೆಯನ್ನು ನೀಡಿರುತ್ತಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಕೆ.ಸಿ ರತನ್, ಮನೋಜ್, ಸಂಜಯ್ ಕೊಟ್ಟಿಗೆಹಾರ, ಪ್ರಶಾಂತ್,ಜಿಲ್ಲಾ ಪಂಚಾಯಿತಿ ಸದಸ್ಯೆ ಸುಧಾಯೋಗೇಶ್, ನಯನ ತಳವಾರ, ಮುಂತಾದವರಿದ್ದರು.