ಸದನದಲ್ಲಿ ನಾನು ಪ್ರತಿಪಕ್ಷ ನಾಯಕ ಎಂದ ಮಾಜಿ ಸಿಎಂ ಸಿದ್ದರಾಮಯ್ಯ…

324
firstsuddi

ಬೆಂಗಳೂರು : ಇಂದು ವಿಶ್ವಾಸ ಮತಯಾಚನೆ ಹಿನ್ನೆಲೆ ಸದನದಲ್ಲಿ ಸಿಎಂ ಕುಮಾರಸ್ವಾಮಿ ಅವರು ಚರ್ಚಿಸುತ್ತಿದ್ದ ವೇಳೆ ಮಧ್ಯದಲ್ಲಿ ಸಿಎಂ ಭಾಷಣವನ್ನು ತಡೆದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಲು ಆರಂಭಿಸಿದ್ದು, ನಾನು ಈ ಸಂದರ್ಭದಲ್ಲಿ ಕೆಲವೊಂದು ಸ್ಪಷ್ಟೀಕರಣ ನೀಡಲು ಇಚ್ಚಿಸುತ್ತೇನೆ. ವಿಶ್ವಾಸ ಮತಯಾಚನೆಗೆ ಅಡ್ಡಿಪಡಿಸಬೇಕು ಎಂದು ನಾನು ಈ ಪ್ರಶ್ನೆ ಮಾಡುತ್ತಿಲ್ಲ. ಆದರೆ ಕೆಲವೊಂದು ಸ್ಪಷ್ಟೀಕರಣ ಈ ಸದನದಲ್ಲಿ ಅಗತ್ಯವಿದೆ. ಶಾಸಕರಿಗೆ ವಿಪ್ ಕೊಡುವ ಅಧಿಕಾರ ಸಂವಿಧಾನ ಬದ್ಧವಾಗಿದೆ. ಆದರೆ ಕೆಲವು ಶಾಸಕರಿಗೆ ವಿಪ್ ಜಾರಿಗೊಳಿಸಿದರೂ ಸದನಕ್ಕೆ ಹಾಜರಾಗಿಲ್ಲ. ಸದನದಲ್ಲಿ ನಾನು ಪ್ರತಿಪಕ್ಷ ನಾಯಕ ಎಂದು ಸಿದ್ದರಾಮಯ್ಯ ಅವರು ಬಾಯಿತಪ್ಪಿ ಹೇಳಿದ್ದು, ಈ ವೇಳೆ ಸಿದ್ದರಾಮಯ್ಯ ಅವರ ಈ ಮಾತನ್ನು ಕೇಳಿದ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರು ವಾಸ್ತವವನ್ನೇ ಹೇಳಿದ್ದಾರೆ ಎಂದು ಮೇಜು ಕುಟ್ಟಿ ಸಂತೋಷ ವ್ಯಕ್ತಪಡಿಸಿದರು. ಕೂಡಲೇ ಪ್ರತಿಕ್ರಯಿಸಿದ ಸಿದ್ದರಾಮಯ್ಯ ಅವರು ನಾನು ನಾಲ್ಕು ವರ್ಷ ಪ್ರತಿಪಕ್ಷ ನಾಯಕನಾಗಿದ್ದೆ. ಈಗಾ ಬಾಯಿ ತಪ್ಪಿ ಮಾತನಾಡಿದ್ದೇನೆ. ಇದರಿಂದ ಇವರಿಗೇನು ಖುಷಿ ಆಯಿತೋ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.