ವಿಜಯಪುರ : ಸಾಲಬಾಧೆ ತಾಳಲಾಗದೆ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಾಂದಕವಟೆ ಗ್ರಾಮದಲ್ಲಿ ನಡೆದಿದೆ. ಶಿವಯೋಗಿ(45) ಮೃತ ರೈತ ಎನ್ನಲಾಗಿದ್ದು, ಶಿವಯೋಗಿ ಅವರು ಗ್ರಾಮೀಣ ಬ್ಯಾಂಕ್‍ನಲ್ಲಿ 2ಲಕ್ಷ ರೂ ಹಾಗೂ 5ಲಕ್ಷ ರೂ ಕೈ ಸಾಲವನ್ನು ಮಾಡಿದ್ದರು. ಮಳೆ ಇಲ್ಲದೆ ಬೆಳೆದ ಬೆಳೆಗಳು ಕೈಕೊಟ್ಟಿದ್ದು, ಹೀಗಾಗಿ ಸಾಲ ತೀರಿಸಲಾಗದೆ ತಮ್ಮ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.