ಮುಂಬೈ: ವಿದ್ಯಾರ್ಥಿಯೊಬ್ಬ ಮಾಡೆಲ್ ನನ್ನು ಬರ್ಬರವಾಗಿ ಹತ್ಯೆಗೈದು ಶವವನ್ನು ಸೂಟ್ ಕೇಸ್ ನಲ್ಲಿ ತುಂಬಿ ಬಿಸಾಕಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. 20 ವರ್ಷದ ವಿದ್ಯಾರ್ಥಿ ಮುಜಾಮಿಲ್ ಸೈಯಿದ್ ಎಂಬಾತ ಮಾನ್ಸಿ ದೀಕ್ಷಿತ್ (20) ಎಂಬ ಮಾಡೆಲ್ ನನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಮಾನ್ಸಿ ದೀಕ್ಷಿತ್ ಹಾಗೂ ಸೈಯಿದ್ ಗೆ ಫೇಸ್ ಬುಕ್ ನಲ್ಲಿ ಪರಸ್ಪರ ಪರಿಚಯವಾಗಿದ್ದು, ಸೋಮವಾರ ಮಧ್ಯಾಹ್ನ ಅಂಧೇರಿಯಲ್ಲಿರುವ ಸೈಯಿದ್ ಅಪಾರ್ಟ್ಮೆಂಟ್ನಲ್ಲಿ ಭೇಟಿಯಾಗಿದ್ದು, ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದು ಸೈಯಿದ್ ಕೈಗೆ ಸಿಕ್ಕ ವಸ್ತುವಿನಿಂದ ಮಾನ್ಸಿ ದೀಕ್ಷಿತ್ ಮೇಲೆ ಹಲ್ಲೆ ಮಾಡಿದ್ದಾನೆ. ಸ್ಥಳದಲ್ಲೇ ಮಾಡೆಲ್ ಮೃತಪಟ್ಟಿದ್ದಾಳೆ. ಇದರಿಂದ ಗಾಬರಿಗೊಂಡ ಸೈಯಿದ್ ಸೂಟ್ಕೇಸ್ ನಲ್ಲಿ ಶವ ತುಂಬಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದಾನೆ. ಇದನ್ನು ಗಮನಿಸಿದ ಕ್ಯಾಬ್ ಡ್ರೈವರ್ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆ ಸ್ಥಳಕ್ಕೆ ಬಂದ ಪೊಲೀಸರು ಸೂಟ್ಕೇಸ್ ತೆರೆದು ನೋಡಿದಾಗ ಮಾಡಲ್ ಶವ ಪತ್ತೆಯಾಗಿದೆ. ಆರೋಪಿ ಸೈಯಿದ್ ನನ್ನು ಪೊಲೀಸರು ಬಂಧಿಸಿದ್ದಾರೆ.










