ಬೆಂಗಳೂರು: ಮೀಟೂ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಗುರುಪ್ರಸಾದ್ ಅವರು ನಾನು ಬಾಯಿಬಿಟ್ರೆ ಏನೇನೋ ಆಗುತ್ತೆ. ಮೀಟೂ ಆರೋಪಗಳನ್ನು ಮಾಡುವ ಮೂಲಕ ತಾವು ಪತಿವ್ರತೆ ಎಂದು ಸಾಬೀತುಪಡಿಸಿಕೊಳ್ಳಲು ನಟಿಯರು ಯತ್ನಿಸುತ್ತಿದ್ದು, ಕೆಲವರು ಮೀಟೂ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಮನೆಯಲ್ಲಿ ತಮ್ಮ ಪತಿ, ಅತ್ತೆ, ಮಾವನ ಎದುರಿಗೆ ಪತಿವ್ರತೆಯರು ಎಂದು ಹೇಳೋಕೆ ಪ್ರಯತ್ನಿಸುತ್ತಿದ್ದಾರೆ. ಕೆಲ ಹೆಣ್ಣು ಮಕ್ಕಳು ಅವಕಾಶ ಸಿಗುವ ಮುನ್ನ ಹೇಗಿರುತ್ತಾರೆ. ಅವಕಾಶ ಸಿಕ್ಕ ನಂತರ ಹೇಗಿರುತ್ತಾರೆ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಕಿರುಕುಳ ಆದಾಗಲೇ ವಿರೋಧಿಸಬೇಕು. ಅದನ್ನು ಬಿಟ್ಟು ವರ್ಷಗಳ ನಂತರ ಈಗ ಆರೋಪಿಸುವುದು ತಪ್ಪು ಎಂದಿದ್ದಾರೆ. ಎರಡನೇ ಸಲ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿಯೇ ಎಲ್ಲಾ ಹೇಳಿದ್ದೀವಿ. ಬೆನ್ನು ತೋರಿಸುವ ಸೀನ್ ಶೂಟ್ ಮಾಡುವಾಗ ನನ್ನ ಹೆಂಡತಿ ಮತ್ತು ಮಗಳು ಅಲ್ಲೇ ಇದ್ದರು. ಯಾವುದೇ ರೀತಿಯ ಮುಜುಗರ ಆಗುವಂತಹ ಸನ್ನಿವೇಶ ಆಗಿರಲಿಲ್ಲ ಎಂದಿದ್ದಾರೆ.










