ಮೈಸೂರಿನ ಮೇಯರ್ ಆಗಿ ಪುಷ್ಪಲತಾ, ಉಪಮೇಯರ್ ಆಗಿ ಶಫಿ ಅಹಮ್ಮದ್ ಆಯ್ಕೆ…

244
firstsuddi

ಮೈಸೂರು:ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಪೂರ್ಣಗೊಂಡಿದ್ದು, ಮೇಯರ್​ ಆಗಿ ಕಾಂಗ್ರೆಸ್​ನ ಪುಷ್ಪಲತಾ ಜಗನ್ನಾಥ್ ಅವರು  ಹಾಗೂ ಉಪ ಮೇಯರ್​ ಆಗಿ ಜೆಡಿಎಸ್ ​ನ ಶಫಿ ಅಹಮ್ಮದ್​ ಅವರು ಆಯ್ಕೆಯಾಗಿದ್ದಾರೆ.ಮೇಯರ್ ಸ್ಥಾನಕ್ಕೆ ಪುಷ್ಟಲತಾ ಪರ 48 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಅವರಿಗೆ 24 ಮತಗಳು ಚಲಾವಣೆಯಾಗಿವೆ.ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ನ ಶಫಿ  ಅಹಮ್ಮದ್ ಅವರ ಪರ 48 ಮತಗಳು ಹಾಗೂ ಬಿಜೆಪಿಯ ಸತೀಶ್ ಅವರಿಗೆ 24 ಮತಗಳು ಚಲಾವಣೆಯಾಗಿವೆ, ಬಿಜೆಪಿಯ ಸುನಂದ ಪಾಲನೇತ್ರ, ಹಾಗೂ ಸತೀಶ್ ಅವರಿಗೆ  ಬಹುಮತವಿಲ್ಲದ ಕಾರಣ ಸೋಲಾಗಿದೆ.