ಚಿಕ್ಕಮಗಳೂರು : ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು ಇದೊಂದು ಚುನಾವಣೆಯ ಘೋಷಣೆ ಅಷ್ಟೇ. ರೈತರಿಗೆ ಅಥವಾ ದೇಶದ ಜನರಿಗೆ ಯಾವುದಾದರೂ ಕೊಡುಗೆ ಕೊಡಬೇಕಾಗಿದ್ರೆ, ಎರಡು ವರ್ಷದ ಹಿಂದೆಯೇ ಕೊಡಬೇಕಾಗಿತ್ತು. ಚುನಾವಣೆ ಸಮೀಪದಲ್ಲಿ ಬಜೆಟ್ ಘೋಷಣೆ ಮಾಡಿದ್ದಾರೆ. ಇದು ಯಾವುದು ಅನುಷ್ಠಾನಕ್ಕೆ ಬರುವುದಿಲ್ಲ. ಪ್ರಧಾನಿಗಳು 15 ಲಕ್ಷ ವನ್ನು ಸಾರ್ವಜನಿಕರ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ರು. ಈಗ ರೈತರ ಅಕೌಂಟ್ ಗೆ 6 ಸಾವಿರ ಹಾಕ್ತಿವಿ ಅಂತ ಹೇಳ್ತಿದ್ದಾರೆ. ಈ ಮೂಲಕ ರೈತರ ಓಲೈಸಿ ಚುನಾವಣಿಯ ಲಾಭ ಪಡೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.









