ಉಪಚುನಾವಣೆ ಬಳಿಕ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಒಂದೇ ವಾರಕ್ಕೆ ಬಿಜೆಪಿ ಬಿಟ್ಟು ಹೊರ ಬರುತ್ತಾರೆ : ದಿನೇಶ್ ಗುಂಡೂರಾವ್.

186
firstsuddi

ಗೋಕಾಕ್ : ಉಪಚುನಾವಣೆ ಬಳಿಕ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಒಂದೇ ವಾರಕ್ಕೆ ಬಿಜೆಪಿ ಬಿಟ್ಟು ಹೊರ ಬರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಉಪಚುನಾವಣೆಯ ಬಳಿಕ ಒಂದೇ ವಾರಕ್ಕೆ ಬಿಜೆಪಿ ಬಿಟ್ಟು ಹೊರಗೆ ಬರುತ್ತಾರೆ. ರಮೇಶ್ ಅವರಿಗೆ ಈಗಾಗಲೇ ಕಾಂಗ್ರೆಸ್ ಬಾಗಿಲು ಮುಚ್ಚಿದೆ. ಅವರಿಗೆ ಜೆಡಿಎಸ್ ಪಕ್ಷಕ್ಕೆ ಸೇರಲೂ ಆಗುವುದಿಲ್ಲ, ಬಿಜೆಪಿಯಲ್ಲಿ ಇರಲು ಆಗುವುದಿಲ್ಲ. ಹೀಗಾಗಿ ಅವರು ತಮ್ಮದೇ ಆದ ಒಂದು ಪಕ್ಷವನ್ನು ಕಟ್ಟಿಕೊಳ್ಳಬೇಕು ಅಷ್ಟೇ. ರಮೇಶ್ ಜಾರಕಿಹೊಳಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಅವರು ಮಂತ್ರಿ ಆಗಿದ್ದಾಗ ಯಾವ ಜಿಲ್ಲೆಗೂ ಹೋಗಿಲ್ಲ. ಸ್ವಂತ ಜಿಲ್ಲೆಯಲ್ಲೂ ಕೂಡಾ ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲ. ಅವಕಾಶ ಸಿಕ್ಕಾಗ ಜನರಿಗೆ ಏನೂ ಮಾಡದೇ ಇದ್ದರೆ ಸಚಿವರಾಗಿ ಏನು ಪ್ರಯೋಜನ. ನಾಳೆ ದಿನ ಇವರು ಸಿಎಂ, ಡಿಸಿಎಂ ಅಥವಾ ಪ್ರಧಾನಿ ಆದರೆ ಏನು ಪ್ರಯೋಜನ? ರಮೇಶ್ ಜಾರಕಿಹೊಳಿ ಅವರು ಸ್ವಾರ್ಥ ಲಾಭಕ್ಕಾಗಿ ರಮೇಶ್ ಡಿಸಿಎಂ ಆಗಲು ಹೋಗುತ್ತಿದ್ದಾರೆ. ಇಂತಹ ಅಭ್ಯರ್ಥಿಯನ್ನು ಮತದಾರರು ತಿರಸ್ಕರಿಸಬೆಕು ಎಂದು ವಾಗ್ದಾಳಿ ನಡೆಸಿದರು.