ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೆಂಗಾಪುರದಲ್ಲಿ ಮುಳ್ಳುಗದ್ದುಗೆ ರಾಮಲಿಂಗೇಶ್ವರ ಮುಳ್ಳುಗದ್ದುಗೆ ಉತ್ಸವ ನಡೆಯಿತು. ಕಳೆದ 45 ವರ್ಷಗಳಿಂದ ನಡೆಯುತ್ತಿರುವ ಈ ಉತ್ಸವಕ್ಕೆ ರಾಜ್ಯದ ವಿವಿಧ ಕಡೆಯಿಂದ ಸಾವಿರಾರು ಭಕ್ತರು ಆಗಮಿಸಿದರು. ಈ ಬಾರಿ ನಡೆದ ಗದ್ದುಗೆಯ ಉತ್ಸವದಲ್ಲಿ ಮುಳ್ಳುಗದ್ದುಗೆಯ ಮೇಲೆ ರಾಮಲಿಂಗೇಶ್ವರ ಸ್ವಾಮೀಜಿ ಕುಣಿದಿದ್ದು, ಭಕ್ತರನ್ನು ಅಚ್ಚರಿಗೆ ನೂಕಿತು. ಯಾವುದೇ ಅಂಜು ಅಳುಕಿಲ್ಲದೆ ಮುಳ್ಳಿನ ಗದ್ದುಗೆ ಮೇಲೆ ಕುಣಿದ ರಾಮಲಿಂಗೇಶ್ಬರ ಸ್ವಾಮೀಜಿಯನ್ನು ಕಂಡ ಭಕ್ತರು ಆಶ್ಚರ್ಯಚಕಿತರಾದರು. ಕೊರೊನಾ ನಂತರ ಆಯೋಜಿಸಲಾಗಿದ್ದ ಊರ ಉತ್ಸವಕ್ಕೆ ಸ್ಥಳೀಯರು ಬಹು ಸಂಭ್ರಮದಿಂದ ಆಚರಿಸಿದ್ದು, ಬೇರೆ ಊರುಗಳ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಸಿದ್ಧಗಾಗಿ ಉತ್ಸವದಲ್ಲಿ ಭಾಗವಹಿಸಿದರು.