ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ ಪ್ರಕರಣ – ಮೂವರು ಅರೆಸ್ಟ್…

79
firstsuddi

ಮಂಗಳೂರು : ಅಪ್ರಾಪ್ತೆಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು, ಮುಡಿಪುವಿನ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ಆಕೆಗೆ ಮದ್ಯಸೇವನೆ ಮತ್ತು ಅಮಲು ಪದಾರ್ಥ ನೀಡಿ ಅತ್ಯಾಚಾರ ಮಾಡಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನಲ್ಲಿ ತನ್ನ ಮಗಳನ್ನು ಮೂವರು ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂದು ದೂರಿದ್ದಾರೆ. ಮೂವರನ್ನು ಬಂಧಿಸಲಾಗಿದ್ದು, ಇದರಲ್ಲಿ ಇಬ್ಬರು ಮಂಗಳೂರಿನವರಾಗಿದ್ದರೆ, ಒಬ್ಬ ಕೇರಳದವನಾಗಿದ್ದಾನೆ ಎಂದರು.

ಆರೋಪಿಗಳಲ್ಲಿ ಓರ್ವ ಇದೇ ಬಾಲಕಿಯ ಜೊತೆಗೆ ಅನುಚಿತ ವರ್ತನೆ ಮಾಡಿದ ಬಗ್ಗೆ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದಾನೆ. ಇದಲ್ಲದೇ, ನಾಗಬನ ಹಾನಿ ಮಾಡಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ ಎಂದರು.

ಪ್ರಕರಣ ಸಂಬಂಧ ಠಾಣೆಗೆ ದೂರು ನೀಡಲು ಬಂದ ಈ ಅಪ್ರಾಪ್ತೆಯ ಮೊಬೈಲ್ ನಂಬರ್ ಪಡೆದು ಆಕೆಯ ಜೊತೆಗೆ ಮೆಸೇಜ್ ಮಾಡಿ ಅನುಚಿತವಾಗಿ ವರ್ತಿಸಿದ ಹೆಡ್ ಕಾನ್ಸ್ಟೇಬಲ್ ನನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.