ಉಡುಪಿ : ನಾಲ್ಕು ವರ್ಷದ ಮಗುವಿನಲ್ಲಿ ಶಂಕಿತ ಟೊಮೆಟೊ ಜ್ವರ.

57
firstsuddi

ಉಡುಪಿ : ಕೇರಳದಲ್ಲಿ ಈಚೆಗಷ್ಟೇ ಕಾಣಿಸಿಕೊಂಡ ಟೊಮೆಟೊ ಜ್ವರ ಇದೀಗ ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದು, ಪೋಷಕರಲ್ಲಿ ಆತಂಕ ಮೂಡಿದೆ.

ಜಿಲ್ಲೆಯ ನಾಲ್ಕು ವರ್ಷದ ಮಗುವಿನಲ್ಲಿ ಜ್ವರ ಕಾಣಿಸಿಕೊಂಡಿದ್ದು, ಇದು ಟೊಮೆಟೊ ಜ್ವರ ಇರಬಹುದು ಎಂದು ಶಂಕಿಸಲಾಗಿದೆ. ಸೋಂಕಿತ ಮಗುವನ್ನು ಐಸಿಯು (ನಿಗಾ ಘಟಕ) ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ರಾಜ್ಯದಲ್ಲಿ ಈ ಜ್ವರ ಕಾಣಿಸಿಕೊಂಡಿರುವ ಬಗ್ಗೆ ಆರೋಗ್ಯ ಇಲಾಖೆ ಯಾವುದೇ ಅಧಿಕೃತ ಪ್ರಕಟಣೆ ಬಿಡುಗಡೆಯಾಗಿಲ್ಲ. ಶಂಕಿತ ಪ್ರಕರಣ ಪತ್ತೆಯ ಹಿನ್ನೆಲೆಯಲ್ಲಿ ಮಂಗಳೂರು, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿಯೂ ಆರೋಗ್ಯ ಇಲಾಖೆ ಅಧಿಕಾರಿಗಳು ಹದ್ದಿನ ಕಣ್ಣು ಇರಿಸಿದ್ದಾರೆ.

ಟೊಮೆಟೊ ಫ್ಲೂ ಬಗ್ಗೆ ಮಾಹಿತಿ ನೀಡಿರುವ ಸಾಂಕ್ರಾಮಿಕ ರೋಗ ತಜ್ಞರು, ಇದು ತನ್ನಿಂತಾನೇ ಕಡಿಮೆಯಾಗುವ ಸೋಂಕು, ಇದಕ್ಕೆ ನಿರ್ದಿಷ್ಟ ಔಷಧಿಯಿಲ್ಲ ಎಂದು ಹೇಳಿದ್ದಾರೆ.