ಬೆಂಗಳೂರು : ಕಟ್ಟಡದ ಮೇಲಿಂದ ಬಿದ್ದು ಮಗು ಸಾವನ್ನಪ್ಪಿರುವ ದಾರುಣ ಘಟನೆ ಚಾಮರಾಜಪೇಟೆಯ ಆಜಾದ್ ನಗರದಲ್ಲಿ ನಡೆದಿದೆ.
ಒಂದೂವರೆ ವರ್ಷದ ಹೆಣ್ಣು ಮಗು ದೀಕ್ಷಾ ಮೃತಪಟ್ಟಿದೆ. ವಿನಯ್ ಮತ್ತವರ ಪತ್ನಿ ಮಗುವನ್ನು ಮನೆಯಲ್ಲಿ ಬಿಟ್ಟು ಸ್ನೇಹಿತರ ಮನೆಗೆ ಹೋಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಅಜ್ಜಿ ಮೊಮ್ಮಗಳಿಗೆ ಊಟ ಮಾಡಿಸುತ್ತಿದ್ದರು. ಆಟವಾಡುತ್ತ ಬಾಲ್ಕನಿಯಲ್ಲಿದ್ದ ಕಬ್ಬಿಣದ ಸರಳು ಹಿಡಿದು ಮೇಲೆ ಹತ್ತಿದ ಮಗು ನೋಡ ನೋಡುತ್ತಿದ್ದಂತೆ ಜಾರಿ ಕೆಳಗೆ ಬಿದ್ದಿದೆ.
ಕೂಡಲೇ ಅಕ್ಕಪಕ್ಕದವರ ನೆರವಿನಿಂದ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ.










