ಸಚಿವ ಎಂ.ಬಿ.ಪಾಟೀಲ್‍ರವರ ಫೋನ್ ಕದ್ದಾಲಿಕೆ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಏನ್ ಹೇಳಿದ್ರು ಗೊತ್ತಾ ?

501

ಚಿಕ್ಕಮಗಳೂರು : ಸಚಿವ ಎಂ.ಬಿ.ಪಾಟೀಲ್‍ರವರ ಫೋನ್ ಕದ್ದಾಲಿಕೆಯನ್ನ ಸೆಂಟ್ರಲ್ ಏಜೆನ್ಸ್‍ಗಳು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಆರೋಪಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಿಬಿಐ ಹಾಗೂ ಇನ್‍ಕಂ ಟ್ಯಾಕ್ಸ್‍ನ ದುರುಪಯೋಗ ಪಡಿಸಿಕೊಳ್ತಿದೆ ಎಂದು ನಾವು ಅನೇಕ ಬಾರಿ ಆರೋಪ ಮಾಡಿದ್ದೇವೆ. ಆದ್ರೆ, ಈ ಫೋನ್ ಕದ್ದಾಲಿಕೆಯನ್ನ ಇನ್‍ಕಂ ಟ್ಯಾಕ್ಸ್, ಸಿಬಿಐ ಅಥವ ಇಡಿ ಮಾಡುತ್ತಿದ್ದೆಯೇ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಎಂ.ಬಿ.ಪಾಟೀಲ್ ಕೂಡ ಈ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ. ಎಲ್ಲವೂ ತಿಳಿದ ಮೇಲೆ ಸೂಕ್ತ ಪ್ರತಿಕ್ರಿಯೆ ನೀಡುತ್ತೇನೆ ಎಂದ್ರು. ಅವರ ಚಲನವಲನಗಳ ಮೇಲೆ ಕಣ್ಣೀಟ್ಟಿರೋದ್ರಿಂದಲೇ ಅವರು ಫೋನ್ ಕದ್ದಾಲಿಕೆಯಾಗಿದೆ ಎಂದು ಆರೋಪಿಸಿದ್ದಾರೆ. ಪರಿಶೀಲನೆಯ ನಂತರ ಎಲ್ಲವೂ ತಿಳಿಯಲಿದೆ ಎಂದು ಹೇಳಿದ್ರು.

 

LEAVE A REPLY

Please enter your comment!
Please enter your name here