ಚಿಕ್ಕಮಗಳೂರು : ಬೆಳಗ್ಗಿನ ಜಾವ 4.30ಕ್ಕೆ ಚಿಕ್ಕಮಗಳೂರಿಗೆ ಆಗಮಿಸಿದ ಕುಮಾರಪರ್ವ ಯಾತ್ರೆಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭವ್ಯ ಸ್ವಾಗತ ದೊರಕಿತ್ತು. ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿಯ ಧರ್ಮಪಾಲ್ ಮನೆಯಲ್ಲಿನ ಗ್ರಾಮವಾಸ್ತವ್ಯಕ್ಕೆ ಎಂಟು ಗಂಟೆಗೆ ಬರ್ತೀನಿ ಅಂದಿದ್ದ ಕುಮಾರಸ್ವಾಮಿ ತಡವಾಗಿ ಬಂದು, ಕಾರ್ಯಕರ್ತರು, ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ರು. ನಿನ್ನೆ ರಾತ್ರಿ ಧರ್ಮಪಾಲ್ ಮನೆಯಲ್ಲೇ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ ಇಂದು ಬೆಳಗ್ಗೆ ಧರ್ಮಪಾಲ್ ಪತ್ನಿ ನಾಗರತ್ನ ಮಾಡಿದ ರಾಗಿರೊಟ್ಟಿ, ಕಾಯಿ ಚಟ್ನಿ, ಸೊಪ್ಪಿನ ಪಲ್ಯ ಸೇವಿಸಿದ್ರು. ಕುಮಾರಸ್ವಾಮಿಗೆ ಜೆಡಿಎಸ್ ವಕ್ತಾರ ಬೋಜೇಗೌಡ, ಧರ್ಮೇಗೌಡ, ಕೋನರೆಡ್ಡಿ, ಮೂಡಿಗೆರೆ ಎಂಎಲ್‍ಎ ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಸಾಥ್ ನೀಡಿದ್ರು.